ಬಂಟ್ವಾಳ, ಮೇ 03 (DaijiworldNews/DB): ಆ್ಯಪ್ ಡೌನ್ಲೋಡ್ ಮಾಡಿಸಿ ಮೊಬೈಲ್ ರೀಚಾರ್ಜ್ ಮಾಡುವಂತೆ ಹೇಳಿ ಅಪರಚಿತನೋರ್ವ ಬಂಟ್ವಾಳದ ವೈದ್ಯರೋರ್ವರಿಗೆ 1,65,000 ರೂ. ವಂಚಿಸಿರುವ ಘಟನೆ ನಡೆದಿದೆ.
ಬಿ.ಸಿ. ರೋಡ್ನ ಕಿಡ್ಸ್ ಕೇರ್ ಸೆಂಟರ್ನ ವೈದ್ಯ ಡಾ. ಬಿ. ಅಶ್ವಿನ್ ಬಾಳಿಗಾ ಅವರ 9845543452 ಮೊಬೈಲ್ ಸಂಖ್ಯೆಗೆ ಏಪ್ರಿಲ್ 29ರಂದು ಸಂಜೆ 5.30ಕ್ಕೆ 9348699702 ಸಂಖ್ಯೆಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ಜಿಯೋ ನಂಬರ್ನ್ನು ಅಪ್ಡೇಟ್ ಮಾಡುವುದಾಗಿ ತಿಳಿಸಿದ್ದಾನೆ. ಇದಕ್ಕಾಗಿ ಗೂಗಲ್ ಪ್ಲೇ ಸ್ಟೋರ್ನಿಂದ ಕ್ವಿಕ್ ಈಝೀ ಪೇ ಆಪ್ನ್ನು ಡೌನ್ಲೋಡ್ ಮಾಡಿಸಿ ನಂತರ ವೈದ್ಯರ ಮೊಬೈಲ್ ನಲ್ಲಿ ಮೈ ಜಿಯೋ ಆಪ್ನಲ್ಲಿ 10 ರೂ. ರೀಚಾರ್ಜ್ ಮಾಡಲುಹೇಳಿದ್ದಾನೆ. ಆತನ ಮಾತನ್ನು ನಂಬಿದ ವೈದ್ಯರು ಎಚ್ಡಿಎಫ್ಸಿ ಬ್ಯಾಂಕ್ ಖಾತಾ ಸಂಖ್ಯೆಯಿಂದ ಡೆಬಿಟ್ ಕಾರ್ಡ್ ವಿವರಗಳನ್ನು ಮೈ ಜಿಯೋ ಆಪ್ನಲ್ಲಿ ಹಾಕಿ 10 ರೂ. ರೀಚಾರ್ಜ್ ಮಾಡಿದ್ದಾರೆ. ತತ್ಕ್ಷಣ ವೈದ್ಯರಿಗೆ ತಿಳಿಯದಂತೆ ಅವರ ಖಾತೆಯಿಂದ ಮೂರು ಬಾರಿ ತಲಾ10 ಸಾವಿರ ರೂ. ಮತ್ತು ಮೂರು ಬಾರಿ ತಲಾ 45 ಸಾವಿರ ರೂ.ಗಳಂತೆ ಒಟ್ಟು 1,65,000 ರೂ. ಅಪರಿಚಿತನ ಖಾತೆಗೆ ವರ್ಗಾವಣೆಯಾಗಿದೆ.
ಇದೀಗ ಈ ವಂಚನೆ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.