ಉಡುಪಿ, ಮೇ 02 (DaijiworldNews/DB): ರಾಜ್ಯದಲ್ಲಿ ಕಲ್ಲಿದ್ದಲ್ಲು ಕೊರತೆ ಕಾರಣದಿಂದ ವಿದ್ಯುತ್ ಉತ್ಪಾನದೆಯನ್ನು ಸ್ಥಗಿತ ಮಾಡಿಲ್ಲ. ರಾಜ್ಯಕ್ಕೆ ಬೇಕಾಗುವ ಕಲ್ಲಿದ್ದಲಿನ ಸರಬರಾಜನ್ನು ಕೇಂದ್ರ ಸರಕಾರದ ಜೊತೆಗೂಡಿ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಏಪ್ರಿಲ್ ತಿಂಗಳಿನಲ್ಲಿ ಮಳೆ ಬಂದಿದ್ದರಿಂದ ವಿದ್ಯುತ್ ಉತ್ಪಾದನೆಯ ಮೇಲಿನ ಒತ್ತಡ ಕಡಿಮೆ ಇದೆ. ರಾಜ್ಯಕ್ಕೆ 13 ರಿಂದ 15 ರೇಕ್ ಕಲ್ಲಿದ್ದಲು ಕೇಂದ್ರ ಸರಕಾರದಿಂದ ನಿತ್ಯ ಪೂರೈಕೆ ಆಗುತ್ತಿದೆ. ಪ್ರತಿ ಎರಡು ದಿನಗಳ ಕಾಲ ಸಭೆ ನಡೆಸಿ ನಿರ್ವಹಣೆ ಮಾಡುತಿದ್ದೇವೆ. ಎಲ್ಲಾ ರೀತಿಯ ಎಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ ಎಂದರು.
ಇಂಧನ ಇಲಾಖೆಯಿಂದ ಮೇ 5ರಿಂದ15ರವರೆಗೆ ರಾಜ್ಯದ ಎಲ್ಲಾ ಟ್ರಾನ್ಸ್ ಫಾರ್ಮರ್ಗಳ ನಿರ್ವಹಣೆ ಮಾಡಲಾಗುವುದು. ಎಲ್ಲಾ ಅಧಿಕಾರಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಟ್ರಾನ್ಸ್ ಫ್ರಾರ್ಮರ್ಗಳು ಬ್ಲಾಸ್ಟ್ ಆಗಿ ರಾಜ್ಯದಲ್ಲಿ ಪ್ರಾಣ ಹಾನಿ ಆಗಿದೆ. 15 ವರ್ಷಗಳ ಮೇಲ್ಪಟ್ಟ ಟ್ರಾನ್ಸ್ ಫ್ರಾರ್ಮರ್ಗಗಳನ್ನು ತತ್ಕ್ಷಣ ಬದಲಾವಣೆ ಮಾಡಲಾಗುವುದು ಎಂದವರು ತಿಳಿಸಿದರು.
ರಾಜ್ಯದಲ್ಲಿ ಇಂಧನ ಇಲಾಖೆಯಿಂದ .ಎಲೆಕ್ಟ್ರಿಕ್ ವಾಹನಗಳಿಗೆ ವಿದ್ಯುತ್ ಚಾರ್ಜಿಂಗ್ ಸೆಂಟರ್ಗಳ ಸ್ಥಾಪನೆ ಮಾಡಲಾಗುವುದು. ಮೊದಲ ಹಂತದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಚಾರ್ಜಿಂಗ್ ಸೆಂಟರ್ ಸ್ಥಾಪನೆ ಮಾಡಿ ಮುಂದೆ ಪ್ರವಾಸಿ ಕೇಂದ್ರ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ತೆರೆಯಲಾಗುವುದು. ಮೇ 7ರಿಂದ ಮೈಸೂರಿನಲ್ಲಿ ಕಾರ್ಯಾರಂಭ ಮಾಡಲಿದೆ. ರಾಜ್ಯದಲ್ಲಿ ಒಟ್ಟು 1 ಸಾವಿರ ಚಾರ್ಜಿಂಗ್ ಸೆಂಟರ್ಗಳ ಸ್ಥಾಪನೆಗೆ ಆದ್ಯತೆ ಕೊಡಲಾಗಿದೆ.
ಜಿಲ್ಲಾ ಕೇಂದ್ರದಿಂದ ತತ್ಕ್ಷಣದಿಂದ ಪ್ರಾರಂಭವಾಗಲಿದ್ದು, ಈ ತಿಂಗಳಿನಲ್ಲಿ 300ಕ್ಕೂ ಹೆಚ್ಚು ಸೆಂಟರ್ ಗಳನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುವ ಚಿಂತನೆ ಹೊಂದಲಾಗಿದೆ ಎಂದು ಸಚಿವ ಸುನಿಲ್ಕುಮಾರ್ ತಿಳಿಸಿದರು.
--