ಕಾರ್ಕಳ, ಮೇ 01 (DaijiworldNews/DB): ಇತ್ತೀಚಿಗೆ ಸಿಡಿಲಾಘಾತದಿಂದ ಮೃತ ಪಟ್ಟ ನೂರಾಳ್ ಬೆಟ್ಟು ಗ್ರಾಮದ ಜಾಣ ಮನೆ ಜಿಗಿತ್ ಜೈನ್ ಅವರ ಮನೆಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನಿಲ್ ಕುಮಾರ್ ಭೇಟಿ ನೀಡಿ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಸರ್ಕಾರದ ಅನುದಾನ 5 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದರು.
ಮೃತರ ಹೆತ್ತವರಿಗೆ ಈ ವೇಳೆ ಸಾಂತ್ವನ ಹೇಳಿದರು. ಈದು ಗ್ರಾ.ಪಂ ಅಧ್ಯಕ್ಷೆ ಜಯಂತಿ, ನಿಕಟ ಪೂರ್ವ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪುರುಷೋತ್ತಮ ಎಚ್., ತಹಸೀಲ್ದಾರ್ ಪ್ರದೀಪ್ ಹರ್ಡೆಕರ್, ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ, ಕಂದಾಯ ನಿರೀಕ್ಷಕ ಶಿವಪ್ರಸಾದ್, ಗ್ರಾಮ ಕರಣಿಕ ಬಾಲಕೃಷ್ಣ ಮತ್ತಿತರರು ಉಪಸ್ಥಿತಿದ್ದರು.