ಮಂಗಳೂರು, ಮೇ 01 (DaijiworldNews/DB): ಕೌಡೂರು ಕಟ್ಟೆ ಬಳಿ ನಡೆದ ವಾಮನ ಪೂಜಾರಿ ಅವರ ಕೊಲೆಯತ್ನ ಪ್ರಕರಣದ ಆರೋಪಿಗಳನ್ನು ನಿರ್ದೋಷಿಗಳೆಂದು ಪರಿಗಣಿಸಿ ಖುಲಾಸೆಗೊಳಿಸಿ ನಾಲ್ಕನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಕೌಡೂರು ಕಟ್ಟೆ ಬಳಿ 2016ರ ಜುಲೈ 17ರಂದು ವಾಮನ ಪೂಜಾರಿ ಎಂಬುವವರಿಗೆ ದಿವ್ಯರಾಜ್ ಶೆಟ್ಟಿ, ಹೇಮಂತ್ ಶೆಟ್ಟಿ, ಚಂದ್ರಹಾಸ ಅಮೀನ್, ಗಂಗಾಧರ ಮತ್ತು ಸುಭಾಶ್ ಶೆಟ್ಟಿ ಸೋಂಟೆಗಳಿಂದ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ವಾಮನ ಪೂಜಾರಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹಲ್ಲೆ ನಡೆಸಿದ ದಿವ್ಯರಾಜ್ ಶೆಟ್ಟಿ ಮತ್ತು ಇತರ ನಾಲ್ವರ ವಿರುದ್ದ ಬಜಪೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಈ ಪ್ರಕರಣದ ವಿಚಾರಣೆ ಮುಕ್ತಾಯವಾಗಿದ್ದು, ಆರೋಪಿಗಳು ನಿರ್ದೋಷಿಗಳೆಂದು ಕೋರ್ಟ್ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ತೀರ್ಪು ನೀಡಿದ್ದಾರೆ. ನ್ಯಾಯವಾದಿ ಎಂ.ಪಿ. ಶೆಣೈ ಮತ್ತು ಮಯೂರ ಕೀರ್ತಿ ಆರೋಪಿಗಳ ಪರ ವಾದ ಮಂಡಿಸಿದ್ದರು.