ತಿರುವನಂತಪುರ,ಜ 02(MSP): ಋತುಮತಿಯಾಗುವ ವಯಸ್ಸಿನ ಮಹಿಳೆಯರು ದೇಗುಲ ಪ್ರವೇಶಿಸಿರುವುದರಿಂದ ಕೆಲವು ಗಂಟೆಗಳ ಕಾಲ ಶುದ್ದೀಕರಣಕ್ಕಾಗಿ ಶಬರಿಮಲೆ ದೇಗುಲದ ಮುಚ್ಚಲಾಗಿದ್ದ ಸನ್ನಿಧಿಯ ಬಾಗಿಲನ್ನು ಇದೀಗ ತೆರೆಯಲಾಗಿದೆ.
ಮಹಿಳೆಯರ ಪ್ರವೇಶದಿಂದ ದೇವಾಲಯ ಅಪವಿತ್ರಗೊಂಡಿದೆ. ಹೀಗಾಗಿ ಕಲಶ ಶುದ್ಧಿ , ಬಿಂಬ ಶುದ್ದಿ ಹಾಗೂ ಇನ್ನಿತರ ಶುದ್ದಿ ಕ್ರಿಯೆಯ ಬಳಿಕ ದೇಗುಲದ ಬಾಗಿಲು ತೆರೆಯಲಾಗಿದೆ ಎಂದು ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ.ಈಗಾಗಲೇ ದೇಗುಲ ಪ್ರವೇಶಿಸುವ ಭಕ್ತರು 18 ಮೆಟ್ಟಿಲಿನ ಕೆಳಗೆ ದೇಗುಲ ಪ್ರವೇಶಿಸುವ ಸೂಚನೆ ಸಿಗುವವರೆಗೆ ಕಾಯುತ್ತಾ ನಿಂತಿದ್ದಾರೆ .
ಇನ್ನು ಇಂದು ಸುಮಾರು 40 ವರ್ಷ ವಯಸ್ಸಿನ ಬಿಂದು ಮತ್ತು ಕನಕದುರ್ಗಾ ಎಂಬುವವರು ಮುಂಜಾವ ದೇಗುಲ ಪ್ರವೇಶಿಸಿದ್ದರು. ಆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಇವರು , ನಾವು 18 ಮೆಟ್ಟಿಲುಗಳನ್ನೇರಿ ದೇಗುಲ ಪ್ರವೇಶಿಸಿಲ್ಲ. ಬದಲಿಗೆ ಗಣ್ಯ ವ್ಯಕ್ತಿಗಳಿಗೆ ಮೀಸಲಾದ ಸ್ಥಳದಿಂದ ಪ್ರಾರ್ಥನೆ ಸಲ್ಲಿಸಿದ್ದೇವೆ. ಪೊಲೀಸರು ನಮ್ಮನ್ನು ಹಿಂದೆ ಕಳುಹಿಸಲು ಪ್ರಯತ್ನಿಸಿಲ್ಲ ಎಂದು ತಿಳಿಸಿದ್ದಾರೆ.