ತಿರುವನಂತಪುರ,ಜ 02(MSP): ಮಲ್ಲಪುರಂನ 46 ವರ್ಷದ ಕನಕದುರ್ಗ ಹಾಗೂ ಕಾಜಿಕೋಡ್ನ ಬಿಂದು ಎಂಬಿಬ್ಬರು ಶಬರಿಮಲೆ ದೇಗುಲ ಪ್ರವೇಶಿದ ಹಿನ್ನಲೆಯಲ್ಲಿ ಶಬರಿಮಲೆ ದೇಗುಲದ ತಂತ್ರಿ ಪಂದಳ ರಾಜಮನೆತನದ ಪ್ರತಿನಿಧಿಯ ಆದೇಶದ ಮೇರೆಗೆ ಶಬರಿಮಲೆ ಸನ್ನಿದಿಯ ಬಾಗಿಲನ್ನು ಶುದ್ದಿಕ್ರಿಯೆಯ ಸಲುವಾಗಿ ಮುಚ್ಚಿದ್ದಾರೆ.
ಕೆಲವೇ ಕ್ಷಣಗಳಲ್ಲಿ ದೇಗುಲದ ಪ್ರಧಾನ ಆರ್ಚಕರು, ಶುದ್ಧಿಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಮಹಿಳೆಯರ ಪ್ರವೇಶದಿಂದ ದೇವಾಲಯ ಅಪವಿತ್ರಗೊಂಡಿದೆ. ಹೀಗಾಗಿ ಕಲಶ ಶುದ್ಧಿಗಾಗಿ ಬಂದ್ ಮಾಡಿದ್ದೇವೆ ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ.ಈಗಾಗಲೇ ಅಲ್ಲಿಗೆ ತಲುಪಿರುವ ಭಕ್ತರನ್ನು 18 ಮೆಟ್ಟಿಲಿನ ಕೆಳಗೆ ಕಾಯುವಂತೆ ಸೂಚಿಸಲಾಗಿದೆ. ಶುದ್ದಿಕ್ರಿಯೆಯ ಬಳಿಕ ಭಕ್ತರನ್ನು ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದೆಂದು ಅರ್ಚಕವೃಂದದವರು ತಿಳಿಸಿದ್ದಾರೆ.
ಬುಧವಾರ ನಸುಕಿನ ಜಾವ ಸುಮಾರು 3.45ಕ್ಕೆ ಬಿಂದು ಹಾಗೂ ಕನಕದುರ್ಗ ಇಬ್ಬರೂ ಮಹಿಳೆ ಭಕ್ತರು ಅಯ್ಯಪ್ಪನ ಸನ್ನಿದಿ ಮುಂಜಾವ ದೇಗುಲ ಪ್ರವೇಶಿಸಿದ್ದರು .ಈ ವಿಚಾರವನ್ನು ಮಹಿಳೆಯರು ದೇಗುಲ ಪ್ರವೇಶಿಸಿದ ವಿಚಾರವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಧೃಡಪಡಿಸಿದ್ದರು. ಮಹಿಳೆಯರಿಬ್ಬರು ದೇವಾಲಯ ಪ್ರವೇಶಿಸಿದ ಹಿನ್ನಲೆಯಲ್ಲಿ ಅಯ್ಯಪ್ಪ ಭಕ್ತ ವಲಯದಲ್ಲಿ ಆಕ್ರೋಶ ಭುಗಿಲೆದಿತ್ತು.44 ವರ್ಷ ಬಿಂದು ಕಾಲೇಜು ಉಪನ್ಯಾಸಕಿ ಮತ್ತು ಸಿಪಿಐ(ಎಂ) ಕಾರ್ಯಕರ್ತೆಯಾಗಿದ್ದು, 42 ವರ್ಷದ ಕನಕದುರ್ಗ ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.