ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರ ನಿಶ್ಚಿತಾರ್ಥ ಭಾನುವಾರ ಬೆಂಗಳೂರಿನ ಲೀಲಾ ಪ್ಯಾಲೇಸ್ ಹೊಟೇಲ್ನಲ್ಲಿ ರವಿವಾರ ಅದ್ದೂರಿಯಾಗಿ ನೆರವೇರಿತು. ಸರಳವಾಗಿ ಮತ್ತು ಎರಡು ಕುಟುಂಬಗಳ ಸಂಪ್ರದಾಯದಂತೆ ತಾಂಬೂಲ ಬದಲಾವಣೆ ಸೇರಿದಂತೆ ವಿವಿಧ ಸಂಪ್ರದಾಯಗಳನ್ನು ನೆರವೇರಿಸಿ ಪರಸ್ಪರ ಉಂಗುರ ಬದಲಾಯಿಸಿಕೊಂಡರು. ಇವರ ವಿವಾಹ ಡಿಸೆಂಬರ್ 6 ನಡೆಯಲಿದೆ. ಹೀಗಾಗಿ ಸ್ಯಾಂಡಲ್ ವುಡ್ ನ ಇನ್ನೊಂದು ಯುವ ಜೋಡಿ ಹಸೆಮಣೆ ಏರುವುದು ಗ್ಯಾರಂಟಿಯಾಗಿದೆ.
