ಮಂಗಳೂರು, ಏ 30 (DaijiworldNews/HR): ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶ ಏರಿಕೆ ಕಾಣುತ್ತಿದ್ದು, ಉರಿ ಸೆಕೆ ಹೆಚ್ಚಾಗುತ್ತಿದೆ.
ಸಾಂದರ್ಭಿಕ ಚಿತ್ರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇದ್ದು, ಸೆಕೆಯು ಹೆಚ್ಚಾಗಿತ್ತು. 34.7 ಡಿ.ಸೆ ಗರಿಷ್ಠ ಉಷ್ಣಾಂಶ ಮತ್ತು 26 ಡಿ.ಸೆ ಕನಿಷ್ಟ ತಾಪಮಾನ ದಾಖಲಾಗಿತ್ತು.
ಇನ್ನು ಭಾರತೀಯ ಹಮಾವಾನ ಇಲಾಖೆಯ ಮಾಹಿತಿ ಪ್ರಕಾರ, ಇಂದು ಕರಾವಳಿ ಭಾಗದಲ್ಲಿ ಎಲ್ಲೋ ಅಲರ್ಟ್ ಘೋಷಿಸಲಗಿದ್ದು, ಈ ವೇಳೆ ಗಾಳಿ ಸಹಿತ ಉತ್ತಮ ಮಳೆಯಾಗಲಿದೆ.