ಉಡುಪಿ, ಏ 29 (DaijiworldNews/HR): ಕರ್ತವ್ಯನಿರತ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಓರ್ವರು ಗುಂಡಿಕ್ಕಿಕೊಂಡು ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ಎಸ್ಎಲ್, ಆರ್ಎಫ್ಎಸ್ಎಲ್, ಫಾರೆನ್ಸಿಕ್ ತಂಡಗಳು ಪರಿಶೀಲನೆ ನಡೆಸಿವೆ ಎಂದು ಉಡುಪಿ ಎಎಸ್ಪಿ ಎಸ್. ಟಿ. ಸಿದ್ದಲಿಂಗಪ್ಪ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹೆಡ್ ಕಾನ್ಸ್ಟೇಬಲ್ ಅಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಕುಂದರ್ ಜಿಲ್ಲಾ ಸಶಸ್ತ್ರ ಪಡೆಯ ಹೆಡ್ ಕಾನ್ಸಟೇಬಲ್ ಆಗಿ ಇದ್ದು, ರಾತ್ರಿ ಪ್ರಶ್ನೆಪತ್ರಿಕೆಯ ಡ್ಯೂಟಿ ಹಾಕಿದ್ದೆವು. ಇಂದು ಬೆಳಿಗ್ಗೆ ರಿಲೀವ್ ಮಾಡಲು ಇತರ ಸಿಬ್ಬಂದಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದರು.
ಇನ್ನು ಕುಟುಂಬಸ್ಥರು ಈಗಾಗಲೇ ಬಂದಿದ್ದಾರೆ ಅವರು ನೀಡುವ ದೂರಿನ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಅವರ ರೈಫಲ್ ಬಳಸಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಸಣ್ಣ ಪ್ರಕರಣ ಒಂದರಲ್ಲಿ ಅವರಿಗೆ ಅಮಾನತು ಆಗಿ ಮೊನ್ನೆಯಷ್ಟೆ ಕೆಲಸಕ್ಕೆ ಮರು ಸೇರ್ಪಡೆಗೊಂಡಿದ್ದರು ಎಂದು ತಿಳಿಸಿದ್ದಾರೆ.