ಬಂಟ್ವಾಳ, ಏ 29 (DaijiworldNews/MS): ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಏ. 28 ರ ಗುರುವಾರ ಸಂಜೆ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಡಬೆಟ್ಟುನಲ್ಲಿ ನಡೆದಿದೆ.
ಮೃತರನ್ನು ಕಾಡುಬೆಟ್ಟು ಕ್ರಾಸ್ ನಿವಾಸಿ ಮಂಜುನಾಥ ಅವರ ಪತ್ನಿ ಭಾಗೀರಥಿ ಎಂದು ಗುರುತಿಸಲಾಗಿದೆ.
ಗುರುವಾರ ಸಂಜೆ ಸುಮಾರು 6.30ಕ್ಕೆ ಭಾಗೀರಥಿ ಮನೆಯಂಗಳದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಹರೀಶ್, ಮಹಿಳಾ ಪಿಎಸ್ಐ ಭಾರತಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.