ಮಂಗಳೂರು, ಏ 28 (DaijiworldNews/SM): ಮಂಗಳೂರಿನ ಎಮ್ಮೆಕೆರೆಯಲ್ಲಿ ಹಾಡಹಗಲೇ ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ನಡೆದಿದೆ. ನಗರದ ಹೊಯಿಗೆಬಜಾರ್ ನಿವಾಸಿ ರಾಹುಲ್ ಯಾನೆ ಕಕ್ಕೆ ರಾಹುಲ್ (೨೫) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.
ಹಳೇ ದ್ವೇಷದ ಹಿನ್ನಲೆಯಲ್ಲಿ ದುಷ್ಕರ್ಮಿಗಳ ತಂಡ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಎಮ್ಮೆಕೆರೆ ಪ್ರದೇಶದಲ್ಲಿ ಇಂದು ನಡೆದ ಕೋಳಿ ಅಂಕಕ್ಕೆ ತೆರಳಿ ಮನೆಯ ಕಡೆಗೆ ವಾಪಸ್ಸಾಗುತ್ತಿದ್ದ ಯುವಕನನ್ನು ಕಾದುಕುಳಿತಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದೆ.
ಕೊಲೆಯಾದ ರಾಹುಲ್ ಬ್ಲ್ಯಾಕ್ ಟೈಗರ್ ಮೂಲಕ ಹೆಸರು ಪಡೆದಿದ್ದ. ಇನ್ನು, ರೌಡಿಶೀಟರ್ ಸೇರಿದಂತೆ ಯುವಕನ ವಿರುದ್ಧ ೩ ಕೇಸ್ ದಾಖಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿದೆ. ಸದ್ಯ, ಯುವಕನ ಮೃತದೇಹವನ್ನು ವೆನ್ಲಾಕ್ ಶವಗಾರದಲ್ಲಿ ಇಡಲಾಗಿದೆ.