ಮಂಗಳೂರು, ಏ 27 (DaijiworldNews/SM): ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ, ಅದರಲ್ಲಿ ಹಿಂದೂ ಧರ್ಮದ ಆಚರಣೆ ಬಗ್ಗೆ ಹೇಳಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೈಬಲ್ನಲ್ಲಿ ಯೇಸುವನ್ನು ನಂಬಬೇಕು, ಯೇಸು ನಿನ್ನನ್ನು ರಕ್ಷಿಸುತ್ತಾನೆ ಎಂದು ಉಲ್ಲೇಖವಿದೆ. ಆದರೆ, ಭಗವದ್ಗೀತೆಯನ್ನು ನಂಬಿದರೆ ಮಾತ್ರ ನೀನು ಹಿಂದೂ ಅಂತ ಉಲ್ಲೇಖವಿಲ್ಲ. ಬೈಬಲ್ ಮತ್ತು ಕುರಾನ್ ಧಾರ್ಮಿಕ ಗ್ರಂಥಗಳು. ಕ್ರಿಶ್ಚಿಯನ್ ಆಗಬೇಕಾದರೆ ಬೈಬಲ್ ನಂಬಬೇಕು ಅಂತ ಹೇಳಲಾಗಿದೆ. ಆದರೆ, ಭಗವದ್ಗೀತೆಯಲ್ಲಿ ಭಗವದ್ಗೀತೆ ನಂಬದಿರುವವರ ಬಗ್ಗೆ ಎಲ್ಲೂ ಮಾತನಾಡಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.