ಕಾರ್ಕಳ, ಏ 27 (DaijiworldNews/HR): ಕುಕ್ಕುಂದೂರು ದುರ್ಗಾನಗರದಲ್ಲಿರುವ ಐತಿಹಾಸಿಕ ಹಿನ್ನಲ್ಲೆಯ ಶ್ರೀ ದುರ್ಗಾಪರಮೇಶ್ವರಿ ಶ್ರೀ ಕ್ಷೇತ್ರದ ವಾರ್ಷಿಕ ಮಹೋತ್ಸವವು ಸಂಪನ್ನಗೊಂಡಿತು.
ಶ್ರೀ ದುರ್ಗಪರಮೇಶ್ವರಿ ದೇವಿಯ ಜಳಕ ಧಾರ್ಮಿಕ ಕಾರ್ಯಕ್ರಮವು ಬಹಳ ವಿಜ್ರಂಭಣೆಯಿಂದ ಸೋಮವಾರ ರಾತ್ರಿ ಜರುಗಿತು. ದುರ್ಗಾ ಹೈಸ್ಕೂಲ್ ಬಳಿಯಲ್ಲಿ ಹೊಳೆಯಲ್ಲಿ ಜಳಕ ಧಾರ್ಮಿಕ ವಿಧಿವಿಧಾನ ಮುಗಿದ ಬಳಿಕ ಧ್ವಜಾ ಹಾದು ಹೋದ ಬಳಿಕ ನಾದಸ್ವರ, ಡೋಲು ಬಡಿತದ ಹಿಂಬದಿಯಲ್ಲಿ ಶ್ರೀ ದೇವಿಯ ವಿಗ್ರಹವನ್ನು ವೈದಿಕರು ತಲೆಯಲ್ಲಿ ಹೊತ್ತು ಶ್ರೀ ಕೇತ್ರದ ಕಡೆಗೆ ತೆರಳಿದರು.
ಈ ನಡುವೆ ಜೋಡುರಸ್ತೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಆರಂಭಗೊಂಡ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್, ಇತ್ತೀಚೆಗಷ್ಟೇ ಆರಂಭಗೊಂಡ ಪೂರ್ಣಿಮಾ ಲೈಫ್ಸೈಲ್ ಒಳಗೊಂಡ ಪೂರ್ಣಿಮಾ ಸಮೂಹ ಸಂಸ್ಥೆಯ ವತಿಯಿಂದ ನಿರ್ಮಿಸಲಾಗಿದ್ದ ದೇವರ ಕಟ್ಟೆಗೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶ್ರೀ ದೇವರ ವಿಗ್ರಹವನ್ನು ಅದೇ ಕಟ್ಟೆಯ ದೇವರ ಪೀಠದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಪ್ರಭೇದಗಳ ಸುಡುಮದ್ದುಗಳನ್ನು ಸಿಡಿಸಿ ಸಂಭ್ರಮಿಸಲಾಯಿತು. ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ಪೂರ್ಣಿಮಾ ಸಮೂಹ ಸಂಸ್ಥೆಗಳ ಮಾಲಕರುಗಳಾದ ರವಿಪ್ರಕಾಶ್ ಪ್ರಭು, ಕಿರಣ ರವಿಪ್ರಕಾಶ್ ಪ್ರಭು ದಂಪತಿಯವರಿಗೆ ಶ್ರೀ ಕ್ಷೇತ್ರದ ಅರ್ಚಕರು ಗಂಧ ಪ್ರಸಾದ ನೀಡಿ ಆಶೀರ್ವಚನ ನೀಡಿದರು.
ಪೂರ್ಣಿಮಾ ಸಮೂಹ ಸಂಸ್ಥೆಯ ಪ್ರಮುಖರಾದ ಹರಿಪ್ರಸಾದ್ ಪ್ರಭು, ನಮೃತಾ ಪ್ರಭು, ಪ್ರಜ್ವಲ್ ಪ್ರಭು, ಪ್ರಖ್ಯಾತ್ ಪ್ರಭು, ಪ್ರಖ್ಯಾತ್ ಪ್ರಭು, ಪವಿತ್ರಾ ಪ್ರಭು, ದಿನೇಶ್ ಪ್ರಭು, ಎಸ್.ನಿತ್ಯಾನಂದ ಪೈ ಮೊದಲಾದವರು ಉಪಸ್ಥಿತರಿದ್ದರು.