ಉಪ್ಪಿನಂಗಡಿ,ಜ 01(MSP): ಡಿಸೆಂಬರ್ 31 ರ ಸೋಮವಾರ ಸಂಜೆ ಉಪ್ಪಿನಂಗಡಿಯ ನೇತ್ರಾವತಿ ನದಿ ಬಳಿ ಮೂವರು ನೀರು ಪಾಲಾದ ಪೈಕಿ ಇಬ್ಬರು ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ . ನೀರುಪಾಲಾದ ವಿದ್ಯಾರ್ಥಿಗಳನ್ನು ನೆಲ್ಯಾಡಿ ಹಸನ್ ರವರ ಮಗ ಮುಹಮ್ಮದ್ ಸುಹೈದ್, ಪೆರ್ನೆಯ ಸಹೀರ್, ಇಳಂತಿಲದ ಕಡವಿನ ಬಾಗಿಲಿನ ಫಿರ್ಝಾನ್ ಎಂದು ಗುರುತಿಸಿಲಾಗಿದೆ.
ಫಿರ್ಯಾನ್ ನ ಬರ್ತ್ ಡೇ ಪಾರ್ಟಿಗೆಂದು ಉಪ್ಪಿನಂಗಡಿ ಜ್ಯೂನಿಯರ್ ಕಾಲೇಜ್ನ ಒಟ್ಟು 18 ಮಂದಿ ವಿದ್ಯಾರ್ಥಿಗಳು ನೇತ್ರಾವತಿ ಕಿನಾರೆಗೆ ತೆರಳಿ ಕೇಕ್ ಕತ್ತರಿಸಿ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಂಡಿದ್ದಾರೆ. ನಂತರ ಈ ಪೈಕಿ 15 ಮಂದಿ ಮರಳಿ ಬಂದಿದ್ದಾರೆ. ನಂತರ ಕೈಗೆ ಮುಖಕ್ಕೆ ಅಂಟಿದ್ದ ಫಿರ್ಯಾನ್ ನದಿಗೆ ಇಳಿದಿದ್ದು ಈ ಸಂದರ್ಭ ನೀರು ಪಾಲಾಗಿದ್ದಾರೆ. ಇವನನ್ನು ರಕ್ಷಿಸಲೆಂದು ನೀರಿಗಿಳಿದ ಮತ್ತಿಬ್ಬರು ಕೂಡಾ ನೀರುಪಾಲಾಗಿದ್ದಾರೆ.
ಮಕ್ಕಳು ಮನೆಗೆ ಬಂದಿಲ್ಲ ಎಂದು ಆತಂಕ ಗೊಂಡ ಪೋಷಕರು ಹುಡುಕಾಟ ನಡೆಸಿದಾಗ ನೀರು ಪಾಲಾಗಿರುವ ವಿಚಾರ ಬಯಲಿಗೆ ಬಂದಿದೆ. ಅಗ್ನಿ ಶಾಮಕ ದಳದ ಸಿಬಂದಿಗಳು , ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದು ಇಬ್ಬರ ಮೃತ ದೇಹ ಪತ್ತೆಯಾಗಿದೆ.ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.