ಪುತ್ತೂರು, ಏ 27 (DaijiworldNews/MS): ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕ ಶಾಂತಿ ಕದಡುವ ಸಂದೇಶ ರವಾನೆ ಮಾಡಿದ ಆರೋಪದಲ್ಲಿ ಪುತ್ತೂರು ಗೃಹರಕ್ಷಕದಳದ ಸಿಬ್ಬಂದಿಯೊಬ್ಬರನ್ನು ಅಮಾನತು ಮಾಡಲಾಗಿದೆ.
ಶಾಸಕ ಸಂಜೀವ ಮಠಂದೂರು ಅವರ ಸೂಚನೆಯಂತೆ ಗೃಹರಕ್ಷಕ ಇಲಾಖೆ ಪುತ್ತೂರು ಆರ್ಟಿಒದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿ ಸಲಾವುದ್ದೀನ್ ನೌಶಾದ್ ಎಂಬವರನ್ನು ಅಮಾನತುಗೊಳಿಸಿದೆ
ಪುತ್ತೂರು ನಗರ ಸಾಲ್ಮರ ನಿವಾಸಿ , ಗೃಹರಕ್ಷಕ ದಳದ ಸಿಬ್ಬಂದಿ ಸಲಾಮುದ್ದೀನ್ ನೌಷಾದ್ ಕಟೀಲು ಜಾತ್ರೋತ್ಸವ ಸಂದರ್ಭದಲ್ಲಿ ನಡೆಯುವ ತೂಟೆದಾರ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ರವಾನಿಸಿದ್ದ ಎನ್ನಲಾಗಿದೆ.
ಘಟನೆ ಬಗ್ಗೆ ಶಾಸಕ ಸಂಜೀವ ಮಠಂದೂರು ಅವರು ಗೃಹರಕ್ಷಕದಳದ ಕಮಾಂಡ್ ಡಾ. ಮುರಳೀಧರ ಚೂಂತಾರು ಅವರ ಗಮನಕ್ಕೆ ತಂದಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿರುವ ಕಮಾಂಡೆಂಟ್ ಅವರು ಆರೋಪಿಯನ್ನು ಅಮಾನತು ಮಾಡಿದ್ದಾರೆ.