ಉಪ್ಪಿನಂಗಡಿ, ಜ 01(MSP): ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ದುರಂತ ಘಟನೆ ವರ್ಷದ ಕೊನೆಯ ದಿನವಾದ ಡಿ. 31 ರ ಸೋಮವಾರ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಪ್ಪಿನಂಗಡಿ ಜೂನಿಯರ್ ಕಾಲೇಜ್ ನಲ್ಲಿ ಕಲಿಯುತ್ತಿರುವ ಮೂರು ವಿದ್ಯಾರ್ಥಿಗಳು ಬರ್ತ್ಡೇ ಪಾರ್ಟಿ ನೇತ್ರಾವತಿ ನದಿ ದಂಡೆಗೆ ತೆರಳಿದ್ದಾರೆ.
ನೀರುಪಾಲಾದ ವಿದ್ಯಾರ್ಥಿಗಳು
ಈ ಸಂದರ್ಭ ನದಿ ಕಿನಾರೆಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಬಳಿಕ ಕೈಗಂಟಿದ್ದ ಕೇಕ್ ನ್ನು ತೊಳೆಯಲೆಂದು ನದಿಗೆ ಇಳಿದ ಸಂದರ್ಭ ನೀರುಪಾಲಾಗಿದ್ದಾರೆ ಎಂದು ವರದಿಯಾಗಿದೆ. ನೀರುಪಾಲಾದ ವಿದ್ಯಾರ್ಥಿಗಳನ್ನು ನೆಲ್ಯಾಡಿ ಗೌಡ್ಸಾಗ್ ಹಸನ್ ರವರ ಮಗ ಮುಹಮ್ಮದ್ ಸುಹೈದ್, ಪೆರ್ನೆಯ ಸಹೀರ್,
ಉಪ್ಪಿನಂಗಡಿಯ ಫಿರ್ಝಾನ್ ಎಂದು ಗುರುತಿಸಿಲಾಗಿದೆ.
ಇವರು ಉಪ್ಪಿನಂಗಡಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗಾಗಿ ವ್ಯಾಪಕ ಶೋಧ ಮುಂದುವರಿದಿದೆ.