ಮಂಗಳೂರು, ಏ 26 (DaijiworldNews/HR): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಏ.27ರ ಬುಧವಾರದಂದು ಮಂಗಳೂರಿಗೆ ಪ್ರವಾಸ ಕೈಗೊಂಡಿದ್ದಾರೆ.
ಏ.27ರ ಬುಧವಾರ ಬೆಳಿಗ್ಗೆ 10.20ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.30ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿ, ಬೆಳಿಗ್ಗೆ 11.50ಕ್ಕೆ ಜಿಲ್ಲಾ ಪಂಚಾಯತ್ಗೆ ಆಗಮಿಸುವರು. ಮಧ್ಯಾಹ್ನ 12 ಗಂಟೆಗೆ ಜಿಲ್ಲಾಪಂಚಾಯತ್ನಲ್ಲಿ ಕೋವಿಡ್-19 ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಮೂಡಬಿದಿರೆಗೆ ತೆರಳಿ ಅಲ್ಲಿನ ಎಕ್ಸಲೆಂಟ್ ಪಿ.ಯೂ ಕಾಲೇಜಿನ ನೂತನ ಅನ್ನದಾಸೋಹ ಕಟ್ಟಡವನ್ನು ಉದ್ಘಾಟಿಸುವರು. 3.30ಕ್ಕೆ ಜೈನ ಬಸದಿಗೆ ಬೇಟಿ ನೀಡುವರು.
ಸಂಜೆ 3.50ಕ್ಕೆ ಮೂಡಬಿದಿರೆಯ ಪ್ರೆಸ್ಕ್ಲಬ್ ಆವರಣದಲ್ಲಿ ನೂತನ ಕಟ್ಟಡಕ್ಕೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವರು.
ಸಂಜೆ 4 ಗಂಟೆಯಿಂದ 5.30ರ ವರೆಗೆ ಮೂಡಬಿದಿರೆಯ ಆಡಳಿತ ಸೌಧದ ಮುಂಬಾಗದಲ್ಲಿ ಮುಲ್ಕಿ- ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 5.40ಕ್ಕೆ ಮೂಡಬಿದಿರೆಯಿಂದ ರಸ್ತೆ ಮಾರ್ಗವಾಗಿ ನಿರ್ಗಮಿಸಿ, ಬಜಪೆಯಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, 6.50ಕ್ಕೆ ವಿಮಾನದ ಮೂಲಕ ಹೊರಟು, ರಾತ್ರಿ 7.45ಕ್ಕೆ ಬೆಂಗಳೂರು ತಲುಪಲಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.