ಬಂಟ್ವಾಳ ಅ 22: ಜಿಲ್ಲೆಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಹಾಗೂ ಶಿಲನ್ಯಾಸ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವಿವಾರ ಬಂಟ್ವಾಳಕ್ಕೆ ಆಗಮಿಸಿದರು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಅಲ್ಲಿಂದ ರಸ್ತೆ ಮಾರ್ಗವಾಗಿ ವಾಹನದಲ್ಲಿ ಬಂಟ್ವಾಳಕ್ಕೆ ತೆರಳಿದರು
ಕಂದಾಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದೊಂದಿಗೆ ಬಿ ಸಿ ರೋಡಿನಲ್ಲಿ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧ,ಉದ್ಘಾಟನೆಗೆಂದು ಮುಖ್ಯಮಂತ್ರಿಗಳ ಆಗಮಿಸಿದ ವೇಳೆ ನೆರೆದಿದ್ದ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಏಕಾಏಕಿ ಮಿನಿವಿಧಾನ ಸೌಧದ ಒಳಗೆ ನುಗ್ಗಲು ಯತ್ನಿಸಿದರು . ಆ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿಜಾರ್ಜ್ ಮಾಡಬೇಕಾದ ಪ್ರಸಂಗವೂ ನಡೆಯಿತು. ಆದರೆ ಈ ಎಲ್ಲಾ ನೂಕಾಟ-ತಳ್ಳಾಟಕ್ಕೆ ಮಿನಿವಿಧಾನಸೌಧ ಬಾಗಿಲು ಉದ್ಘಾಟನೆಯ ದಿನದಂದೇ ತುಂಡಾಯಿತು.