ಮಂಗಳೂರು,ಏ 25 (DaijiworldNews/MS): ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಬೇಡ್ಕರ್ ವೃತ್ತದಿಂದ ಫಳ್ನೀರ್ ರಸ್ತೆಯವರೆಗೆ ಒಳಚರಂಡಿ ಅಳವಡಿಸುವುದರಿಂದ ಮೇ.8 ರವರೆಗೆ, ಯೆಯ್ಯಾಡಿ ಮುದ್ದರ ಮನೆ ರಸ್ತೆಗೆ ಕಾಲು ಸಂಕ ನಿರ್ಮಾಣ ಮಾಡಲು ಮೇ.19 ರವರೆಗೆ, ಶರಬತ್ ಕಟ್ಟೆ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ನಡೆಯಲಿರುವುದರಿಂದ ಮೇ.28 ರವರೆಗೆ ಕಾಮಗಾರಿ ನಡೆಯುವ ಪ್ರಯುಕ್ತ ಆ ರಸ್ತೆಗಳಲ್ಲಿ ಮೋಟಾರು ವಾಹನ ಕಾಯ್ದೆ ಪ್ರಕಾರ ರಸ್ತೆ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಅಂಬೇಡ್ಕರ್ ವೃತ್ತದಿಂದ ಫಳ್ನೀರ್:ಅಂಬೇಡ್ಕರ್ ವೃತ್ತದಿಂದ ಅವೇರಿ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಅಂಬೇಡ್ಕರ್ ಸರ್ಕಲ್ನಲ್ಲಿ ಮುಂದಕ್ಕೆ ಚಲಿಸಿ, ಡಾನ್ ಬಾಸ್ಕೋ ಹಾಲ್ ಕ್ರಾಸ್ನಿಂದಾಗಿ ಅವೇರಿ ಜಂಕ್ಷನ್ ತಲುಪಿ ಮುಂದಕ್ಕೆ ಸಂಚರಿಸುವುದು.
ಅವೇರಿ ಜಂಕ್ಷನ್ನಿಂದ ಅಂಬೇಡ್ಕರ್ ವೃತ್ತದ ಕಡೆಗೆ ಹೋಗುವ ಎಲ್ಲಾ ವಾಹಗಳು ಅಥೆನಾ ಆಸ್ಪತ್ರೆ ರಸ್ತೆಯ ಮೂಲಕ ಬಲ್ಮಠ ತಲುಪಿ ಅಲ್ಲಿಂದ ಅಂಬೇಡ್ಕರ್ ವೃತ್ತದ ಕಡೆಗೆ ಚಲಿಸುವುದು.
ಯೆಯ್ಯಾಡಿ: ಯೆಯ್ಯಾಡಿ ಕಡೆಯಿಂದ ಕುಂಟಲ್ಪಾಡಿ ರಸ್ತೆಯ ಮೂಲಕ ಶಕ್ತಿನಗರ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಮೇರಿಹಿಲ್ ಜಂಕ್ಷನ್ನಿಂದ ಗುರುನಗರ ರಸ್ತೆಯಾಗಿ ಆದಿತ್ಯನಗರ ರಸ್ತೆಯ ಮೂಲಕ ಶಕ್ತಿನಗರ ಬಿಕರ್ಣಕಟ್ಟೆ ಹಾಗೂ ನಂತೂರು ಕಡೆಗೆ ಸಂಚರಿಸುವುದು.
ಶಕ್ತಿನಗರ ಕಡೆಯಿಂದ ಯೆಯ್ಯಾಡಿ ರಸ್ತೆಯ ಮೂಲಕ ಸಂಚರಿಸುವ ಎಲ್ಲಾ ವಾಹನಗಳು ಆದಿತ್ಯನಗರ, ಗುರುನಗರ ರಸ್ತೆಯ ಮೂಲಕ ಮೇರಿಹಿಲ್ ಜಂಕ್ಷನ್ಗೆ ಬಂದು ಅಲ್ಲಿಂದ ಮುಂದೆ ಸಂಚರಿಸುವುದು.
ಶರಬತ್ ಕಟ್ಟೆ:ರಾಷ್ಟ್ರೀಯ ಹೆದ್ದಾರಿ-66ರ ಪದವು ಜಂಕ್ಷನ್ನಿಂದ ಶರಬತ್ ಕಟ್ಟೆ ರಸ್ತೆ ಮೂಲಕ ಯೆಯ್ಯಾಡಿ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಪದವು ಜಂಕ್ಷನ್ನಲ್ಲಿ ಮುಂದಕ್ಕೆ ಚಲಿಸಿ ಕೆ.ಪಿ.ಟಿ ಜಂಕ್ಷನ್ನಲ್ಲಿ ಬಲಕ್ಕೆ ತಿರುಗಿ, ಯೆಯ್ಯಾಡಿ ಜಂಕ್ಷನ್ ಕಡೆಗೆ ಸಂಚರಿಸುವುದು.
ಶರಬತ್ ಕಟ್ಟೆ ಜಂಕ್ಷನ್ನಿಂದ ಶರಬತ್ ಕಟ್ಟೆ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ-66ರ ಪದವು ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಶರಬತ್ ಕಟ್ಟೆ ಜಂಕ್ಷನ್ನಲ್ಲಿ ಮುಂದಕ್ಕೆ ಚಲಿಸಿ ಕೆ.ಪಿ.ಟಿ ಜಂಕ್ಷನ್ನಲ್ಲಿ ಎಡಕ್ಕೆ ತಿರುಗಿ ಪದವು ಜಂಕ್ಷನ್ ಕಡೆಗೆ ಸಂಚರಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.