ಕಾರ್ಕಳ, ಏ 25 (DaijiworldNews/MS): ನಗರದ ಪುಲ್ಕೇರಿ-ಬಜಗೋಳಿ ರಾಷ್ಟ್ರೀಯ ಹೆದ್ದಾರಿಯ ಕರಿಯಕಲ್ಲು ಸ್ಮಶಾನ ಮುಂಭಾಗದಲ್ಲಿ ಹಾದು ಹೋಗುತ್ತಿದ್ದ ಕಾರೊಂದರ ಸೈಲೆನ್ಸರ್ನಲ್ಲಿ ಕಾಣಿಸಿಕೊಂಡ ಹೊಗೆಯ ಅವಾಂತರದಿಂದ ಓರ್ವ ಬಲಿಯಾದ ಘಟನೆ ಎ.24ರಂದು ಸಂಭವಿಸಿದೆ.
ಗಿರೀಶ್ ಛಲವಾದಿ (39) ಘಟನೆಯಲ್ಲಿ ಜೀವ ಕಳೆದುಕೊಂಡವರು. ಬಾವಿ ತೋಡುವ ಕೆಲಸ ನಿರ್ವಹಿಸುತ್ತಿದ್ದ ಅವರು ಟಾಟಾ ಇಡಿಗೋ ಕಾರಿನಲ್ಲಿ ದುರ್ಗಪೊಪ, ಕೃಷ್ಣ, ಬಸಪ್ಪ ಎಂಬವರೊಂದಿಗೆ ಜೋಡುರಸ್ತೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಪ್ರಯಾಣಿಸುತ್ತಿದ್ದ ವಾಹನದ ಸೈಲೆನ್ಸರ್ನಿಂದ ದಟ್ಟ ಹೊಗೆ ಹೊರ ಉಗುಳುತ್ತಿತ್ತು. ಇದರಿಂದ ಗಾಬರಿಗೊಂಡು ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ ಚಾಲಕ ಗಿರೀಶ್ ಹಾಗೂ ಕೃಷ್ಣ ಎಂಬವರು ಕಾರಿನಿಂದ ಹೊರಬಂದು ರಸ್ತೆಯ ಮೇಲೆ ನಿಂತುಕೊಂಡಿದ್ದರು.
ಅದೇ ವೇಳೆಗೆ ಕಾರ್ಕಳ ಪುಲ್ಕೇರಿ ಕಡೆಯಿಂದ ಅತೀ ವೇಗವಾಗಿ ಬರುತ್ತಿದ್ದ ಬಸ್ಸೊಂದು ರಸ್ತೆಯ ಬದಿ ನಿಂತುಕೊಂಡಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಅತಘಾತದ ತೀವ್ರತೆಗೆ ಕಾರಿನ ಹೊರಭಾಗ ರಸ್ತೆಯಲ್ಲಿ ನಿಂತುಕೊಂಡಿದ್ದ ಗಿರೀಶ್, ಕೃಷ್ಣ ಎಂಬವರು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಅದಾಗಲೇ ಗಿರೀಶ್ ಸಾವನೊಪ್ಪಿರುವ ಬಗ್ಗೆ ಅಲ್ಲಿನ ವೈದ್ಯರು ದೃಢ ಪಡಿಸಿದ್ದಾರೆ. ಕಾರು ಜಖಂ ಗೊಂಡಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.