ಮಂಗಳೂರು, ಡಿ 31(SM): ದ.ಕ. ಜಿಲ್ಲೆಗೆ ನೂತನ ಪೊಲೀಸ್ ವರಿಷ್ಟಾಧಿಕಾರಿಯವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ತಕ್ಷಣದಿಂದಲೇ ಆದೇಶವನ್ನು ಹೊರಡಿಸಿದೆ. ನೂತನ ಎಸ್ಪಿಯಾಗಿ ಬಿ.ಎಂ. ಲಕ್ಷ್ಮೀಪ್ರಸಾದ್ ರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ರವಿಕಾಂತೇ ಗೌಡ(ಎಡ) ಲಕ್ಷ್ಮೀಪ್ರಸಾದ್(ಬಲ)
ಬೆಂಗಳೂರಿನಲ್ಲಿ ಆಂತರಿಕಾ ಭದ್ರತಾ ವಿಭಾಗದಲ್ಲಿ ಅಧಿಕಾರಿಯಾಗಿದ್ದ ಲಕ್ಷ್ಮೀಪ್ರಸಾದ್ ರನ್ನು ವರ್ಗಾವಣೆಗೊಳಿಸಲಾಗಿದೆ. ಇನ್ನು ದ.ಕ. ಜಿಲ್ಲೆಯಲ್ಲಿ ಇದೀಗ ಕರ್ತವ್ಯದಲ್ಲಿರುವ ಎಸ್ಪಿ ಡಾ. ಬಿ.ಆರ್. ರವಿಕಾಂತೇ ಗೌಡ ಅವರಿಗೆ ಭಡ್ತಿ ನೀಡಲಾಗಿದೆ.
2018ರ ಜನವರಿ ತಿಂಗಳಲ್ಲಿ ಡಾ. ರವಿಕಾಂತೇ ಗೌಡ ದ.ಕ. ಜಿಲ್ಲಾ ಎಸ್ಪಿಯಾಗಿ ನೇಮಕಗೊಂಡಿದ್ದರು. ಇದೀಗ ವರ್ಷಾಂತ್ಯಕ್ಕೆ ಅವರಿಗೆ ಭಡ್ತಿ ನೀಡಿ ವರ್ಗಾವಣೆಗೊಳಿಸಲಾಗಿದೆ. ಬೆಂಗಳೂರಿನ ಪೊಲೀಸ್ ಫೈರ್ ಸರ್ವಿಸ್ ವಿಭಾಗದ ಡೆಪ್ಯೂಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್(ಡಿಐಜಿ) ಹುದ್ದೆಗೆ ನೇಮಕಗೊಳಿಸಿ ಆದೇಶ ನೀಡಲಾಗಿದೆ.