ಮಂಗಳೂರು, ಏ 25 (DaijiworldNews/MS): ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಏ. 24 ಭಾನುವಾರ ರಾತ್ರಿ ಜಪ್ಪಿನಮೊಗರು ಬಳಿಯ ನಡುಮೊಗರು ಎಂಬಲ್ಲಿ ನಡೆದಿದೆ. ಲಾರಿ ಚಾಲಕನ ಅತಿ ವೇಗದ ಮತ್ತು ಅಜಾಗರೂಕತೆಯ ಚಾಲನೆಯಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೃತ ಸವಾರನನ್ನು ರೊನಾಲ್ಡ್ (59) ಎಂದು ಗುರುತಿಸಲಾಗಿದೆ. ಇವರು ಕೆಲಸ ನಿಮಿತ್ತ ನಗರಕ್ಕೆ ಆಗಮಿಸಿ ಕೊಣಾಜೆಯಲ್ಲಿರುವ ತಮ್ಮ ಮನೆಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಅತಿ ವೇಗವಾಗಿ ಬಂದ ಲಾರಿ ಮೊದಲು ಕಾರೊಂದಕ್ಕೆ ಢಿಕ್ಕಿ ಹೊಡೆದು ಬಳಿಕ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ ಇದರಿಂದ ಸ್ಕೂಟರ್ ಸವಾರ ಲಾರಿಯಡಿಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.