ನವದೆಹಲಿ, ಡಿ31(SS): ಹೊಸ ವರ್ಷ ಆಚರಣೆಯ ಸಂತಸದಲ್ಲಿರುವಾಗಲೇ ಇತ್ತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ.
ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 69.04 ರೂ. ಮತ್ತು ಡೀಸೆಲ್ ದರ 63.09 ರೂ. ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ 74.67 ರೂ. ಮತ್ತು ಡೀಸೆಲ್ ದರ 66.01 ರೂ. ಇದೆ. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಪೆಟ್ರೋಲ್ ದರ 71.15 ರೂ. ಮತ್ತು ಡೀಸೆಲ್ ದರ 64.84 ರೂ. ಇದ್ದರೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್ ದರ 71.62 ರೂ. ಮತ್ತು ಡೀಸೆಲ್ ದರ 66.59 ರೂ. ಇದೆ.
ಸೋಮವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ ಇಳಿಕೆಯಾಗಿದ್ದು, 69.60 ರೂ. ಇದೆ. ಭಾನುವಾರ ಪೆಟ್ರೋಲ್ ದರ 69.82 ರೂ. ಇತ್ತು. ಸೋಮವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 24 ಪೈಸೆ ಇಳಿಕೆಯಾಗಿದ್ದು, 63.43 ರೂ. ಇದೆ. ಭಾನುವಾರ ಡೀಸೆಲ್ ದರ 63.67 ರೂ. ಇತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 76 ಡಾಲರ್ (5,335 ರೂ.) ತಲುಪಿದ್ದರೆ, ಈಗ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 3181 ರೂ.ಗೆ ಇಳಿಕೆಯಾಗಿದೆ. ಆಗಸ್ಟ್ 16 ರಿಂದ ಬೆಲೆ ಏರಿಕೆ ಕಂಡಿದ್ದ ತೈಲ ಬೆಲೆ ಅಕ್ಟೋಬರ್ ವೇಳೆ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 91 ರೂ. ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 80.10 ರೂ. ಏರಿಕೆಯಾಗಿತ್ತು.