ಕಾರ್ಕಳ,ಏ 23 (DaijiworldNews/HR): ಕಾರ್ಕಳದಿಂದ ಬೆಳ್ತಂಗಡಿ ಕಡೆಗೆ ತಡರಾತ್ರಿ ಹೋಗುತ್ತಿದ್ದ ಖಾಸಗಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಈದು ಹೊಸ್ಮಾರು ಎಂಬಲ್ಲಿ ಸಂಭವಿಸಿದೆ.
ಬೆಂಗಳೂರು ನೊಂದಾಯಿತ ಕಾರು ಇದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಒಂದೆಡೆಯಲ್ಲಿ ಸುರಿಯುತ್ತಿದ್ದ ಮಳೆಯಲ್ಲಿ ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಕಾರು ಚಲಾಯಿಸಿ ಹೋಗಿದ್ದು, ಮತ್ತೊಂದೆಡೆಯಲ್ಲಿ ಕಾರಿನ ಮುಂದಿನ ಬಲಬದಿಯ ಟಯರ್ ಸಂಪೂರ್ಣ ಸವೆದಿರುವುದರಿಂದ ನಿಯಂತ್ರಣ ತಪ್ಪಿ ಈ ಘಟನೆಗೆ ಒಳಗಾಗಿದೆ ಎಂದು ತಿಳಿದುಬಂದಿದೆ.