ಕಾರ್ಕಳ, ಏ 23 (DaijiworldNews/MS): ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸದ ಹೊರತು ಪ್ರಜಾತಂತ್ರ ವ್ಯವಸ್ಥೆ ಸುಭದ್ರಗೊಳ್ಳಲು ಸಾಧ್ಯವಿಲ್ಲ. ಆ ನೆಲೆಯಲ್ಲಿ ಗ್ರಾಮೀಣ ನಾಯಕತ್ವಕ್ಕೆ ಪ್ರೋತ್ಸಾಹ ನೀಡುವುದು ಕಾಂಗ್ರೆಸ್ ಪಕ್ಷದ ಆಧ್ಯತೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು. ಗ್ರಾಮ ಸ್ವರಾಜ್ಯಕ್ಕೆ ಪೂರಕವಾದ ಪಂಚಾಯತ್ ರಾಜ್ ಪರಿಕಲ್ಪನೆ ನೆಹರೂ ಇಂದಿರಾ ಕಾಲದಿಂದ ಬೆಳೆದು ಬಂದಿದೆ. ದಿ. ಪ್ರಧಾನಿ ರಾಜೀವ ಗಾಂಧಿ ಅದಕ್ಕೊಂದು ಸಾಂವಿಧಾನಿಕ ಸ್ವರೂಪವನ್ನು ಕೊಟ್ಟು ಆಡಳಿತ ವಿಕೇಂದ್ರೀಕರಣದೊಂದಿಗೆ ಗ್ರಾಮಗಳ ಅಭಿವೃದ್ದಿಯ ಕಾರ್ಯವನ್ನು ಗ್ರಾಮದ ಜನರಿಗೆ ನೀಡಿದರು. ಇದು ಹಳಿತಪ್ಪದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು , ಹೆಬ್ರಿ ಬ್ಲಾಕ್ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾ ಉಪಾಧ್ಯಕ್ಷರಾದ ನೀರೆ ಕ್ರಷ್ಣ ಶೆಟ್ಟಿ, ಸುಧಾಕರ ಕೋಟ್ಯಾನ್,ನಿಕಟಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ ಮಡಿವಾಳ, ಜಿಲ್ಲಾ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ, ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷೆ ರೋಷನಿ ಒಲಿವೇರಾ, ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ, ಕೆಪಿಸಿಸಿ ಸಂಯೋಜಕ ಬಿ. ಕೃಷ್ಣಮೂರ್ತಿ, ರಾಜ್ಯ ಕಿಸಾನ್ ಘಟಕ ಕಾರ್ಯದರ್ಶಿ ಉದಯ ವಿ. ಶೆಟ್ಟಿ, ಜಿಲ್ಲಾ ಪರಿಶಿಷ್ಟ ಘಟಕದ ಉಪಾಧ್ಯಕ್ಷ ಸೋಮನಾಥ ನಾಯ್ಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮಾಲಿನಿ ರೈ, ಜಿಲ್ಲಾ ಐಟಿ ಕಾರ್ಯದರ್ಶಿ ಸತೀಶ ಕಾರ್ಕಳ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಜೋರ್ಜ ಕ್ಯಾಸ್ತಲೀನೋ, ದಯಾನಂದ ಶೆಟ್ಟಿ, ಪುರಸಭಾ ಸದಸ್ಯರಾದ ಶುಭದ ರಾವ್, ವಿನ್ನಿಬೋಲ್ಡ್, ಪ್ರತಿಮಾರಾಣೆ, ಮಾಜಿ ಪುರಸಭಾಧ್ಯಕ್ಷ ಸುಬೀತ್ ಕುಮಾರ್, ಕುಕ್ಕುಂದೂರು ಗ್ರಾಮಾಧ್ಯಕ್ಷ ಥೋಮಸ್ ಮಸ್ಕರೇನಸ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಾಂತಿ ಶೆಟ್ಟಿ, ಕಾರ್ಯದರ್ಶಿ ಶೋಭಾ ಹಾಗೂ ವಿವಿಧ ಗ್ರಾಮ ಪಂಚಾಯತುಗಳ ಸದಸ್ಯರು ಉಪಸ್ಥಿತರಿದ್ದರು.