ಮಂಗಳೂರು, ಅ22: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮೂಡುಬಿದರೆ ಕ್ಷೇತ್ರದ ಆಕಾಂಕ್ಷಿಗಳಾದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತು ಮಾಜಿ ಸಚಿವ ಅಭಯ್ ಚಂದ್ರ ಜೈನ್ ನಡುವಿನ ಭಿನ್ನಾಭಿಪ್ರಾಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲೇ ಸ್ಪೋಟಗೊಂಡಿದೆ. ಹೀಗಾಗಿ ಕಾಂಗ್ರೇಸ್ ಪಕ್ಷದ ಜಿಲ್ಲಾಘಟಕದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸಾಭೀತಾಗಿದೆ.
ರವಿವಾರ ಬಂಟ್ವಾಳ ಹಾಗೂ ಧರ್ಮಸ್ಥಳದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ದಕ್ಷಿಣ ಕನ್ನಡ ಜಿಲ್ಲೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿಯನ್ನು ಸ್ವಾಗತಿಸಲೆಂದು ಈ ಎರಡು ಬಣಗಳು ಪ್ರತ್ಯೇಕ- ಪ್ರತ್ಯೇಕವಾಗಿ ತಯಾರಿಯೊಂದಿಗೆ ಆಗಮಿಸಿದ್ದರು. ಐವನ್ ಡಿಸೋಜಾ ತಮ್ಮ ಬೆಂಬಲಿಗರು ಹಾಗೂ ಹುಲಿವೇಷದಾರಿಗಳೊಂದಿಗೆ ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ಅಭಯ್ ಚಂದ್ರ ಜೈನ್ ಮತ್ತು ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ತಮ್ಮ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ಆಗಮನಕ್ಕಾಗಿ ಕಾಯುತ್ತಿದ್ದರು. ಸಿಎಂನ ಆಗಮನದೊಡನೆ ಎರಡು ಗುಂಪುಗಳು ಸಿನಿಮೀಯಾ ದೃಶ್ಯದಂತೆ ಪ್ರತ್ಯೇಕವಾಗಿ ತಾಮುಂದು- ತಾಮುಂದು ಎಂದು ಜೋರು ಜೋರಾಗಿ ಘೋಷಣೆ ಕೂಗಲಾರಂಭಿಸಿದರು. ಸಿಎಂಗೆ ಸ್ವಾಗತ ಕೋರಲು ಮುಂದಾದ ಐವನ್ ಡಿಸೋಜಾ ರನ್ನು ಸಚಿವ ಅಭಯ್ ಚಂದ್ರ ಜೈನ್ ಹಿಂದಕ್ಕೆ ತಳ್ಳಿ ಸಿಎಂ ಹತ್ತಿರ ಸುಳಿದಾಡದಂತೆ ತಡೆಯುವಲ್ಲಿ ಯಶಸ್ವಿಯಾದರು.ಇದರೊಂದಿಗೆ ನೂಕುನುಗ್ಗಲಿನ ವೇಳೆ ತಳ್ಳಾಟದಿಂದ ಕೆಲವು ಕಾರ್ಯಕರ್ತರು ಕಾಲು ಜಾರಿ ಬಿದ್ದ ಪ್ರಸಂಗವೂ ನಡೆಯಿತು.
ಮೂಡು ಬಿದರೆ ಕ್ಷೇತ್ರದ ಶಾಸಕ ಅಭಯ್ ಚಂದ್ರ ಜೈನ್ ಈ ಬಾರಿ ವಿಧಾನ ಸಭಾ ಚುನಾವಣೆಯಿಂದ ಹಿಂದೆ ಸರಿಯುವ ಸಾದ್ಯತೆ ಇರೋದ್ರಿಂದ, ಈ ಹಿನ್ನಲೆಯಲ್ಲಿ ಮೂಡುಬಿದರೆ ಕ್ಷೇತ್ರದ ಪಕ್ಷದ ಟಿಕೆಟ್ ಮೇಲೆ ಕಟ್ಟಿಟ್ಟಿರುವ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಹಾಗೂ ಐವನ್ ಡಿಸೋಜಾ ಜಿಲ್ಲೆಯಲ್ಲಿ ಪ್ರತಿಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ
,