ಮಂಗಳೂರು, ಏ 23 (DaijiworldNews/HR): ಸ್ವಸ್ತಿಕ್ ಕಲಾ ಕೇಂದ್ರದ 18 ನೇ ವಾರ್ಷಿಕೋತ್ಸವದ ಸಂದರ್ಭ ಏಪ್ರಿಲ್ 16 ರಂದು ಜಲ್ಲಿಗುಡ್ಡೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 2022ರ ಸಾಲಿನ ಸ್ವಸ್ತಿಕ್ ಕಲಾ ಪ್ರಶಸ್ತಿಯನ್ನು ತುಳುವ ಮಾಣಿಕ್ಯ ಅರವಿಂದ ಬೋಳಾರ್ ಹಾಗೂ ನಟಿ ಸಪ್ತಾ ಪಾವೂರ್ ರವರಿಗೆ ಪ್ರಧಾನ ಮಾಡಲಾಯಿತು.
ಪ್ರಶಸ್ತಿಸ್ವೀಕರಿಸಿ ಅವರು ಮಾತನಾಡಿದ ಕಲಾವಿದರು, ನಮ್ಮನ್ನು ಗುರುತಿಸಿ ಪ್ರೋತ್ಸಾಹಿಸಿ ಗೌರವ ನೀಡಿದ ಸ್ವಸ್ತಿಕ್ ಕಲಾ ಕೇಂದ್ರದ "ಸ್ವಸ್ತಿಕ್ ಕಲಾ ಪ್ರಶಸ್ತಿ" ಎಂದೆಂದೂ ಸ್ಮರಣೀಯ ಎಂದು ಹೇಳಿದರು.
ಗಣ್ಯ ಅತಿಥಿಗಳ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ಸ್ಥಳೀಯ ಹತ್ತು ಅಂಗನವಾಡಿಗಳಿಗೆ ನೀರಿನ ಜಾರ್ ವಿತರಣೆ, ನೃತ್ಯ ಕ್ಕಾಗಿ ಬಹುಮಾನ,ಚಿತ್ರ ಕಲಾ ಸ್ಪರ್ಧಾ ವಿಜೇತರಿಗೆ ನಗದು ಪುರಸ್ಕಾರ, ಅತ್ಯುತ್ತಮ ಶಿಕ್ಷಣ ಕೇಂದ್ರ ವಾದ ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಪಡ್ಪು ಇಲ್ಲಿನ ಶಾಲೆಗೆ 2022ರ ರೋಲಿಂಗ್ ಟ್ರೋಫಿ, ಅಶಕ್ತರಿಗೆ ವೀಲ್ ಚೇರ್ ಹಾಗೂ ವಾಕರ್ ನೀಡಿಕೆ, ಮುಂತಾದ ಕೊಡುಗೆಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ನೀಡಲಾಯಿತು.
ಗೌರವಾಧ್ಯಕ್ಷ ಗಂಗಾಧರ್, ಅಧಕ್ಷ ಮೋಹನ್, ಸಲಹೆಗಾರರಾದ ನಾಗೇಶ್ಎಂ ಹಾಗೂ ಮಾಲತಿ ನಾಯರ್, ಉಪಾಧ್ಯಕ್ಷ ಸಂತೋಷ್ ಕುಮಾರ್, ಅಶೋಕ್ ರಾವ್, ಸಾಂಸ್ಕೃತಿಕ ಕಾರ್ಯದರ್ಶಿ ಸುಮಲತಾ, ಗಣೇಶ್ ಕೊಟ್ಟಾರಿ, ಪ್ರ. ಕಾರ್ಯದರ್ಶಿ ವಿಶ್ರಾಂತ್, ಪದ್ಮನಾಭ, ಉಷಾ ಟೀಚರ್, ಶೋಭಾಹರೀಶ್,ಮಲ್ಲಿಕಾ, ಪ್ರೇಮಾ ಭವಾನಿ,ಯತೀಶ್ ಸಾಲ್ಯಾನ್, ಜ್ಯೋತಿ ಅಶೋಕ್,ಮೇಜಿ ಡಿಸೋಜ, ನಿತೇಶ್, ಜಯಣ್ಣ ಹಾಗೂ ಸಪ್ತಾ ತಂದೆ ತಾಯಿ ಸತೀಶ್- ಪವಿತ್ರಾ, ಅಲ್ಲದೆ ಗಣ್ಯರಾದ ಪ್ರಕಾಶ್ ಪೈ, ಸಜಿತಾ ಕೃಷ್ಣ, ವತ್ಸಲಾ ಮಲ್ಲಿ,ಸುಬ್ರಹ್ಮಣ್ಯ,ಯಶವಂತ್ ಪಡುಬೀಡು, ಡೆನಿಸ್ ಮೆಂಡೋನ್ಸಾ, ಶ್ರೀಕರ್ ಹಾಗೂ ಹೇಮಂತ್ ಅಮೀನ್ ಉಪಸ್ಥಿತರಿದ್ದರು.
ಮೋಹನ್ ಕುಮಾರ್ ಸ್ವಾಗತಿಸಿ, ಆನಂದ ರಾವ್ ವಾರ್ಷಿಕ ವರದಿ ಮಂಡಿಸಿದರು, ಸಮಾಜ ಸೇವಾ ಕಾರ್ಯದರ್ಶಿ ಕೆ.ಸಿ. ಹರಿಶ್ಚಂದ್ರ ರಾವ್ ರವರು ಸಪ್ತಾ ಹಾಗೂ ಅರವಿಂದ್ ಬೋಳಾರ್ ರ ಅಭಿನಂದನಾ ಭಾಷಣ ಮಾಡಿದರು ಹಾಗೂ ಸಂತೋಷ್ ಕುಮಾರ್ ನಿರೂಪಿಸಿದರು.