ಮಂಗಳೂರು, ಏ 23 (DaijiworldNews/MS): ನಗರದ ಕುಲಶೇಖರ ನಿವಾಸಿಯಾದ,ಮೇಘನಾ ನಾವಡ ಕೆ ರವರು ಮಂಡಿಸಿದ "ಗ್ರೀನ್ ಸಿಂಥೆಸಿಸ್ ಆಫ್ ಮೆಟಲ್ ಆಕ್ಸೈಡ್ ನ್ಯಾನೋಪಾರ್ಟಿಕಲ್ಸ್: ಆ ಫ್ಲೆಕ್ಸಿಬಲ್ ಇಂಟರ್ಫೇಸ್ ಫಾರ್ ಬಯೋಲಾಜಿಕಲ್, ಎನ್ವಿರಾನ್ಮೆಂಟಲ್ ಆಂಡ್ ಕ್ಯಾಟಾಲಿಟಿಕ್ ಅಪ್ಲಿಕೇಶನ್ಸ್ " ಎಂಬ ಸಂಶೋಧನಾ ಮಹಾಪ್ರಬಂಧ ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ ಎಚ್. ಡಿ ಪದವಿ ಪ್ರದಾನ ಮಾಡಿರುತ್ತದೆ.
ಇವರಿಗೆ ವಿವಿಯ ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗದ ಪೊ| ಜಿ. ಕೆ. ನಾಗರಾಜರವರು ಮಾರ್ಗದರ್ಶನ ಮಾಡಿದ್ದಾರೆ. ಪ್ರಸ್ತುತ ಇವರು ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ, ಇಲ್ಲಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕೆ.ಎಂ.ಎಫ್ ನ ನಿವೃತ್ತ ಸಹಾಯಕ ವ್ಯವಸ್ಥಾಪಕರಾದ ಶ್ರೀ ಕೆ ಸುಬ್ಬರಾವ್ ಹಾಗೂ ಸರಕಾರಿ ಪ್ರಾಥಮಿಕ ಶಾಲೆ, ಪೆದಮಲೆಯ ಶಿಕ್ಷಕಿಯಾದ ಶ್ರೀಮತಿ ಇಂದಿರಾ ಎಂ. ರವರ ಪುತ್ರಿ ಹಾಗೂ ಎಂ.ಐ.ಟಿ, ಮಣಿಪಾಲದ ಸಹಾಯಕ ಪ್ರಾಧ್ಯಾಪಕರಾದ ಗಣೇಶ ಎ. ರವರ ಧರ್ಮಪತ್ನಿಯಾಗಿದ್ದಾರೆ.