ಕೊಪ್ಪಳ, ಡಿ31(SS): ಮುಸ್ಲಿಂ ಕುಟುಂಬವೊಂದು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಭೋಜನಕೂಟ ಏರ್ಪಡಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿರುವ ಘಟನೆ ನಡೆದಿದೆ.
ಮುನ್ನಸಾಬ ಬೇವಿನಗಿಡದ್ ಮುಸ್ಲಿಂ ಕುಟುಂಬವೊಂದು ಗಂಗಾವತಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಾಲಾಧಾರಿಗಳಿಗಾಗಿ ಭೋಜನ ವ್ಯವಸ್ಥೆ ಮಾಡಿ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಈ ಮೂಲಕ ಹಿಂದೂ ಮುಸ್ಲಿಮರ ನಡುವಿನ ಬಾಂಧವ್ಯ ಮತ್ತಷ್ಟೂ ಹೆಚ್ಚಾಗಿದೆ.
ಊಟಕ್ಕೆ ಕೇಸರಿಬಾತ್, ಪುಳಿಯೊಗರೆ, ಆಲೂಗಡ್ಡೆ ಪಲ್ಯ, ಅನ್ನ, ಸಾಂಬಾರು, ಮೊಸರು ಮಾಡಿ ಬಡಿಸಿದೆ.
ಭೋಜನ ಸವಿದ ಅಯ್ಯಪ್ಪ ಮಾಲಾಧಾರಿಗಳು ಮುನ್ನಸಾಬ ಕುಟುಂಬಕ್ಕೆ ಧನ್ಯವಾದ ತಿಳಿಸಿದ್ದು ಮಾತ್ರವಲ್ಲದೆ, ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.