ದುಬೈ, ಡಿ31(SS): ಸೈಂಟ್ ಥಾಮಸ್ ಓರ್ಥೊಡಕ್ಸ್ ಕ್ಯೆಥೆಡ್ರಲ್ ಚರ್ಚೊಂದು ತನ್ನ ಸುವರ್ಣ ಮಹೋತ್ಸವ ಆಚರಣೆಗೆ ಮೀಸಲಿಟ್ಟ ಹಣವನ್ನು ಕೇರಳ ನೆರೆ ಸಂತ್ರಸ್ತರಿಗೆ ದೇಣಿಗೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ತನ್ನ ಸ್ಥಾಪನೆಯ 50 ವರ್ಷದ ಅಂಗವಾಗಿ ಯುಎಇನ ಸೈಂಟ್ ಥಾಮಸ್ ಒರ್ಥೊಡಕ್ಸ್ ಕ್ಯೆಥೆಡ್ರಲ್ ಚರ್ಚ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮಾತ್ರವಲ್ಲದೆ, ಸುವರ್ಣ ಮಹೋತ್ಸವವನ್ನು ವೈಭವದಿಂದ ಆಚರಿಸಲು ನಿರ್ಧರಿಸಿತ್ತು. ಆದರೆ ಇದೀಗ ಸೈಂಟ್ ಥಾಮಸ್ ಒರ್ಥೊಡಕ್ಸ್ ಕ್ಯೆಥೆಡ್ರಲ್ ಚರ್ಚ್ ಹಲವಾರು ಕಾರ್ಯಕ್ರಮಗಳನ್ನು ರದ್ದುಪಡಿಸಿ, ಅದರಲ್ಲಿ ಉಳಿತಾಯವಾಗುವ ಹಣವನ್ನು ಕೇರಳ ನೆರೆಸಂತ್ರಸ್ತರಿಗೆ ನೀಡಲು ನಿರ್ಧರಿಸಿದೆ.
ಈ ವರ್ಷದ ಆರಂಭದಲ್ಲಿ ಚರ್ಚ್ನ ಆಡಳಿತವು ಕೇರಳದ ಪ್ರವಾಹ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ವಿಕೋಪ ಪರಿಹಾರ ನಿಧಿಗೆ 2 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿತ್ತು. ಇದೀಗ ಭೀಕರವಾದ ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ಸೈಂಟ್ ಥಾಮಸ್ ಓರ್ಥೊಡಕ್ಸ್ ಚರ್ಚ್ 5,42,643 ದಿರ್ಹಂಗಳನ್ನು ದೇಣಿಗೆಯಾಗಿ ನೀಡಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ.
ಕೇರಳ ನೆರೆ ಪರಿಹಾರ ನಿಧಿಗೆ 10 ದಶಲಕ್ಷ ಡಾಲರ್ಗಳನ್ನು ವ್ಯಯಿಸಿರುವುದಾಗಿ ವಿಕಾರ್ ಫಾದರ್ ನಿನಾನ್ ಫಿಲಿಪ್ ಪನಕ್ಕಮಟ್ಟಂ ತಿಳಿಸಿದ್ದಾರೆ.