ಗಂಗೊಳ್ಳಿ, ಏ 21 (DaijiworldNews/MS): ನಿಶ್ಚಿತಾರ್ಥವಾದ ಮದುವೆ ರದ್ದಾಗಿದ್ದು ಮದುವೆ ನೆಂಟಸ್ತಿಕೆ ಮಾಡಿದ ಮಹಿಳೆಯು 90 ಸಾವಿರ ರೂಪಾಯಿ ಹಣ ಪಡೆದು ವಂಚಿಸಿರುವುದಾಗಿ ನಾಡ ಗ್ರಾಮದ ಪಡುಕೋಣೆಯ ನಿವಾಸಿ ಸುಬ್ರಹ್ಮಣ್ಯ ಹೆಬ್ಬಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮದುವೆ ನೆಂಟಸ್ತಿಕೆ ಮಾಡಿದ ಶಿರಸಿಯ ಗೀತಾ ಹೆಗಡೆ ಹಣ ಪಡೆದು ವಂಚಿಸಿದವರು. ಕಳೆದ ನವೆಂಬರ್ ನಲ್ಲಿ ಹುಡುಗಿ ಬಗ್ಗೆ ತಿಳಿಸಿದ್ದು ಮದುವೆಯ ಮಾತುಕತೆ ಆಗಿದೆ ಈ ವೇಳೆ ಗೀತಾ ನಿಶ್ಚಿತಾರ್ಥವಾದ ಕೂಡಲೇ 90000 ಹಾಗೂ ಮದುವೆಯಾದ ಅನಂತರ 90,000 ರೂ. ನೀಡಬೇಕು ಎಂದು ತಿಳಿಸಿದ್ದಾರೆ.
ನವಂಬರ್ 17ರಂದು ಪಡುಕೋಣೆಯ ಸುಬ್ರಹ್ಮಣ್ಯ ಅವರ ಮನೆಯಲ್ಲಿ ನಿಶ್ಚಿತಾರ್ಥವಾಗಿದೆ ಅದೇ ದಿನ ಸುಬ್ರಮಣ್ಯ ಅವರು ಗೀತಾ ಅವರ ಬ್ಯಾಂಕ್ ಖಾತೆಗೆ 90000 ಹಣವನ್ನು ಹಾಕಿದ್ದಾರೆ. ಆನಂತರ ಯುವತಿಯು ಸುಬ್ರಮಣ್ಯ ಅವರಿಗೆ ಕರೆ ಮಾಡಿ ತಾನು ಬೇರೆ ಜಾತಿಯವರು ಆಗಿದ್ದು ಮದುವೆ ಇಷ್ಟವಿಲ್ಲವೆಂದು ತಿಳಿಸಿದ್ದು ಮದುವೆ ರದ್ದಾಗಿದೆ.
ಸುಬ್ರಹ್ಮಣ್ಯ ಅವರು ಹಣವನ್ನು ಕೇಳಿದಾಗ ಗೀತಾ ಅವರು ಕೊಡಲು ನಿರಾಕರಿಸಿದ್ದಾರೆ ಮೋಸ ಮಾಡುವ ಉದ್ದೇಶದಿಂದಲೇ ಹಣ ಪಡೆದು ವಂಚಿಸಿರುವುದಾಗಿ ದೂರು ದಾಖಲಿಸಲಾಗಿದೆ.