ಬೆಂಗಳೂರು, ಡಿ(SM)30: ಕರ್ನಾಟಕ ಸರ್ಕಾರದ ಸಾಲಮನ್ನಾ ಘೋಷಣೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ. ಟ್ವಿಟ್ ಮೂಲಕ ಸಾಲಮನ್ನಾದ ಮಾಹಿತಿಯನ್ನು ನೀಡಿದ್ದಾರೆ.
ಮೋದಿ ಅವರ ಟೀಕೆಗೆ ಉತ್ತರಿಸಿರುವ ಕುಮಾರಸ್ವಾಮಿ, ಪ್ರಧಾನಿಯೊಬ್ಬರು ಸಾಲಮನ್ನಾ ಯೋಜನೆಯನ್ನು ಟೀಕಿಸಿದ್ದು ಅತ್ಯಂತ ದುರದೃಷ್ಠಕರ ಎಂದು ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ರೈತರು ಮಾಡಿದ ಸರಣಿ ಪ್ರತಿಭಟನೆಗಳ ಬಗ್ಗೆ ಗಮನ ವಹಿಸದೆ ಈಗ ಕರ್ನಾಟಕ ಸರ್ಕಾರವು ಸಾಲಮನ್ನಾ ಮಾಡಲು ಅನುಸರಿಸುತ್ತಿರುವ ಪಾರದರ್ಶಕ ಕ್ರಮಗಳ ಬಗ್ಗೆ ಬೊಟ್ಟು ಮಾಡುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ.
ಇನ್ನು ಯಾವ ಜಿಲ್ಲೆಯಲ್ಲಿ ಎಷ್ಟು ಸಾಲಮನ್ನಾ ಆಗಲಿದೆ, ಸಾಲಮನ್ನಾ ಆಗಲಿರುವ ಒಟ್ಟು ಮೊತ್ತವೆಷ್ಟು ಎಂಬಿತ್ಯಾದಿ ಮಾಹಿತಿಯನ್ನು ನೇರವಾಗಿ ಮೋದಿ ಅವರ ಟ್ವಿಟ್ಟರ್ ಖಾತೆಗೆ ಟ್ವೀಟ್ ಮಾಡಿದ್ದಾರೆ. ಸಾಲಮನ್ನಾ ಮಾಡಲು ಸರ್ಕಾರ ಅನುಸರಿಸುತ್ತಿರುವ 12 ಅಂಶಗಳ ಕ್ರಮಗಳ ಬಗ್ಗೆಯೂ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.