ಉಡುಪಿ, ಏ 20 (DaijiworldNews/MS): ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಕುಲಶೇಖರ, ಮಂಗಳೂರು ಇಲ್ಲಿ ಕರೆಯಲಾದ ಹುದ್ದೆಯ ನೇಮಕಾತಿಯಲ್ಲಿ ಆಗಿರುವ ಅವ್ಯವಹಾರ ನಡೆದಿದ್ದು ಈ ಬಗ್ಗೆ ಸಿಓಡಿ, ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕರ್ನಾಟಕ ದಲಿತ ಸಮಿತಿಯ ಜಿಲ್ಲಾ ಸಂಚಾಲಕರಾದ ರಮೇಶ್ ಕೋಟ್ಯಾನ್ ಆಗ್ರಹಿಸಿದ್ದಾರೆ.
ಅವರು ಬುಧವಾರ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, 'ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ, ಕುಲಶೇಖರ, ಮಂಗಳೂರು ಇಲ್ಲಿ ದಿನಾಂಕ ಏಪ್ರಿಲ್ 23ರಂದು ನೇಮಕಾತಿಗಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.ಈ ನೇಮಕಾತಿ ಪ್ರಕ್ರಿಯೆ ನಿಯಮಬದ್ಧವಾಗಿಲ್ಲವೆಂದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್, ಎಸ್.ಟಿ, ಸುರೇಶ್ ಇವರು ಸಹಕಾರಿ ಸಚಿವರಾದ ಸೋಮಶೇಖರ್ರವರ ಸಂಬಂಧಿಯೆಂದು ಹೇಳಿಕೊಂಡು, ಕಾನೂನು ಬಾಹಿರವಾಗಿ ಲಂಚ ಪಡೆದುಕೊಂಡು ನೇಮಕಾತಿ ಮಾಡಿಕೊಂಡಿರುತ್ತಾರೆ ಎಂದು ರಮೇಶ್ ಆರೋಪಿಸಿದ್ದಾರೆ.
ಪ್ರವರ್ಗ 2-ಎ ಮಹಿಳೆಯೊಬ್ಬರಿಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಕರೆಯಲಾದ 'ಕೆಮಿಸ್ಟ್ ದರ್ಜೆ-1, ಆಡಳಿತ ಸಹಾಯಕರು ದರ್ಜೆ-2 ಮಾರುಕಟ್ಟೆ ಸಹಾಯಕರು ದರ್ಜೆ-2ಕ್ಕೆ ಆರ್ಜಿಯನ್ನು ಸಲ್ಲಿಸಿದ್ದು, ಲಿಖಿತ ಪರೀಕ್ಷೆಯಲ್ಲಿ ಇವರಿಗೆ 154 ಅಂಕ ಬಂದಿರುತ್ತದೆ.
ಇವರು ಒಕ್ಕೂಟದ ಮಾಜಿ ಅಧ್ಯಕ್ಷರಾದ ರವಿರಾಜ ಹೆಗ್ಡೆಯವರ ಉಡುಪಿ ಕಛೇರಿಯಲ್ಲಿ ಸಹಾಯಕ ವಕೀಲರಾಗಿ ಕೆಲಸ ನಿರ್ವಹಿಸುವವರ ಪತ್ನಿಯಾಗಿರುತ್ತಾರೆ. ಇವರು ಸಹಡಳಿತ ವ್ಯವಸ್ಥಾಪಕರಾದ ಸತೀಶ್ ಶೆಟ್ಟಿಯವರ ಹಸ್ತಕ್ಷೇಪದ ಕಾರಣ ನೇಮಕಾತಿ ಪರೀಕ್ಷೆಯಲ್ಲಿ ನಿರೀಕ್ಷಿತ ಹೆಚ್ಚು ಅಂಕ ಗಳಿಸಿರುವುದು ಸಂಶಯ ಮತ್ತು ಪರೀಕ್ಷೆಯಲ್ಲಿಯೂ ಅವ್ಯವಹಾರವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ರಮೇಶ್ ಕೋಟ್ಯಾನ್ ಆರೋಪಿಸಿದ್ದಾರೆ.
ಕೆ ಎಂಫ್ ನ ಸ್ವಜನ ಪಕ್ಷಪಾತದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗ ರೈತ ಸಮುದಾಯದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.ಈಗಾಗಲೇ ಸರಕಾರಕ್ಕೆ ಕೊಟ್ಟಿರುವ ದೂರಿನಂತೆ ನೇಮಕಾತಿಯನ್ನು ಕೂಡಲೇ ತಡೆ ಹಿಡಿದು, ಲಕ್ಷ ಗಟ್ಟಲೆ ಹಣ ಕೊಟ್ಟು ನೇಮಕ ಮಾಡುತ್ತಿರುವ ಈ ಅವ್ಯವಹಾರಕ್ಕೆ ತಕ್ಷಣ ಬ್ರೇಕ್ ಹಾಕಬೇಕು. ಸಿಓಡಿ ತನಿಖೆ ಮಾಡಬೇಕು ಎಂದು ರಮೇಶ್ ಕೋಟ್ಯಾನ್ ಆಗ್ರಹಿಸಿದ್ದಾರೆ.
ಪ್ರಶಾಂತ್ ತೊಟ್ಟಂ ಮತ್ತು ಸಂಜೀವ್ ಬಲ್ಕೂರು ಉಪಸ್ಥಿತರಿದ್ದರು