ಕುಂದಾಪುರ, ಏ 19 (DaijiworldNews/SM): ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆದೂರುನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಂಪಿಂಗ್ ಯಾರ್ಡ್ ಬಗ್ಗೆ ವಿವರಣೆ ಪಡೆಯಲು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಸ್ಥಳ ಪರಿಶೀಲನೆ ನಡೆಸಿದರು . ಇಲ್ಲಿ ಡಂಪಿಂಗ್ ಯಾರ್ಡ್ ಮಾಡಬಾರದೆಂಬಂತೆ ಈ ಹಿಂದೆಯೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಡಂಪಿಂಗ್ ಯಾರ್ಡ್ ಮಾಡುವ ಉದ್ದೇಶದಿಂದ ಈ ಭಾಗದಲ್ಲಿ ಸುಮಾರು ಎರಡೂವರೆ ಎಕ್ರೆ ಪ್ರದೇಶವನ್ನ ಖರೀದಿಸಿದ್ದು, ಅಲ್ಲಿ ಡಂಪಿಂಗ್ಯಾರ್ಡ ಮಾಡಬಾರದೆಂದು ಸಾರ್ವಜನಿಕರು ಈ ಹಿಂದಿನಿಂದ ವಿರೋಧಿಸುತ್ತಿದ್ದು ಈಗಲೂ ವಿರೋದಿಸುತ್ತಿದ್ದಾರೆ. ಈ ಸ್ಥಳಕ್ಕೆ ಡಿಸಿ ಸಹಿತ ಹಲವು ಅಧಿಕಾರಿಗಳೂ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಡಿಸಿ ಕೂರ್ಮಾ ರಾವ್ ಮಾತನಾಡಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಹಿನ್ನೆಲೆ ಬಂದಿದ್ದು ಇಲ್ಲಿನ ವಸ್ತುಸ್ಥಿತಿಯ ಬಗ್ಗೆ ತಿಳಿದು ಮುಂದಿನ ಕ್ರಮಗಳ ಬಗ್ಗೆ ಚಿಂತನೆ ಮಾಡಲಾಗುತ್ತದೆ ಎಂದರು.
ಡಿಸಿ ಅವರು ಸ್ಥಳ ಪರಿಶೀಲನೆ ನಡೆಸುವ ಬಗ್ಗೆ ಮಾಹಿತಿ ಇರಲಿಲ್ಲ. ಯಾವುದೇ ಕಾರಣಕ್ಕೂ ಇಲ್ಲಿ ಡಂಪಿಂಗ್ ಯಾರ್ಡ್ ಆಗಲು ಬಿಡಲ್ಲ ಎಂದು ಸಾರ್ವಜನಿಕರ ಪರವಾಗಿ ಕೆದೂರು ಗ್ರಾಮಪಂಚಾಯತ್ ಉಳ್ತೂರು ವಾರ್ಡ್ ಸದಸ್ಯ ಪ್ರಶಾಂತ್ ಶೆಟ್ಟಿ ಹೇಳಿದರು.