ಬೆಂಗಳೂರು, ಏ 19 (DaijiworldNews/SM): ರಾಜ್ಯದಲ್ಲಿ ಕಿಡಿಗೇಡಿಗಳ ಕೆಲಸ ತೀಕ್ಷ್ಣವಾಗುತ್ತಿದೆ. ಸಾಮಾಜಿಕ ಜಾಲತಾಣ ಮೂಲಕ ಜನರ ಭಾವನೆ ಕೆರಳಿಸುತ್ತಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯದಲ್ಲಿ ಧರ್ಮದ ದುರ್ಬೋಧನೆ ಜಾಸ್ತಿಯಾಗುತ್ತಿದೆ. ಕಲ್ಲುತೂರಾಟ ಮಾಡಿ ಬೆಂಕಿ ಹಚ್ಚಿ ಸಮಾಜ ಒಡೆಯುತ್ತಿದ್ದಾರೆ. ಸಂಘರ್ಷ ಆದ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮವಾಗಿದೆ. ಪುಂಡ ಪೋಕರಿ ಕೆಟ್ಟವರಿಗೆ ಕಟ್ಟುನಿಟ್ಟಿನ ಕ್ರಮ. ಸತ್ಯ ಹೇಳುವವರಿಗಿಂತ ಟೀಕಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
150 ಸೀಟು ಗೆಲ್ತೀರಾ ಎಂದು ಎಲ್ಲರೂ ಪ್ರಶ್ನಿಸುತ್ತಾರೆ. ಗೆಲುವಿಗೆ ಬೇಕಾದ ಸಂಘಟನಾತ್ಮಕ ವ್ಯೂಹ ರಚನೆಯಾಗಿದೆ. ಜನಾದೇಶದ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಉತ್ತರಿಸುತ್ತೇವೆ. ಬಿಜೆಪಿ 150ಕ್ಕೂ ಹೆಚ್ಚು ಸೀಟು ಗೆಲ್ಲುತ್ತದೆ. ಕಾಂಗ್ರೆಸ್ ಗೆಲ್ಲಲಿರುವ 150ಸೀಟು ಯಾವ ರಾಜ್ಯದ್ದು? ಸಿದ್ದರಾಮಯ್ಯ ಡಿಕೆಶಿಯೇ ಉತ್ತರಿಸಬೇಕು ಎಂದು ಕೋಟ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದ್ದಾರೆ.