ಉಡುಪಿ ಅ 22 :ಸಾಮಾನ್ಯವಾಗಿ ರಜಾದಿನ ಎಂದ್ರೆ ಇಂದಿನ ಯುವ ಜನಾಂಗಕ್ಕೆ ಫುಲ್ ಖುಷಿ . ಹೆಚ್ಚಾಗಿ ಯುವ ಜನತೆ ಸಾಮಾಜಿಕ ಜಾಲತಾಣ ಅಥವಾ ಸ್ನೇಹಿತರೊಂದಿಗೆ ರಜಾದಿನದ ಮಜಾವನ್ನು ಕಳೆಯುವುದು ಜಾಸ್ತಿ. ಆದ್ರೆ ರಜಾ ದಿನವನ್ನು ಸಮಾಜ ಸೇವೆಯ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಕಳೆದಿದ್ದಾರೆ ಉಡುಪಿಯ ಕುಂಜಾರು ಗಿರಿಯ ಯುವಕರು. ಪ್ರತಿಭಾರಿಯೂ ವಿಶಿಷ್ಟ ಕಾರ್ಯಕ್ರಮಗಳನ್ನು ಎರ್ಪಡಿಸಿ ಕುಂಜಾರುಗಿರಿಯ ನಾಗರೀಕರ ಪ್ರಶಂಸೆಗೆ ಪಾತ್ರರಾಗುವ ಇವರು ಇಂದು ಮತ್ತೆ ಸಮಾಜ ಸೇವೆಯನ್ನು ಮಾಡುವ ಮೂಲಕ ಯುವ ಜನಾಂಗಕ್ಕೆ ಮಾದರಿಯಾದ್ರು .ಕುಂಜಾರು ಗಿರಿಯಿಂದ ಪಾಜಕ ಕ್ಷೇತ್ರಕ್ಕೆ ಸಾಗುವ ರಸ್ತೆ ಬದಿಯುದಕ್ಕೂ ಅಳೆತ್ತರಕ್ಕೆ ಬೆಳೆದ ಹುಲ್ಲನ್ನು ಕಟಾವು ಮಾಡುವ ಮೂಲಕ ಇವರು ಜನರ ಅಭಿನಂದನೆಗೆ ಪಾತ್ರರಾದರು. ಈ ತಂಡದಲ್ಲಿ ಕೇವಲ ಯುವಕರು ಮಾತ್ರವಲ್ಲ ಹಿರಿಯರು ಕೂಡಾ ಪಾಲ್ಗೊಂಡು ಸಮಾಜಸೇವೆಗೆ ಕೈ ಜೋಡಿಸುತ್ತಾರೆ. ಸುಮಾರು 50ಕ್ಕೂ ಅಧಿಕ ಯುವಕರು ಹಾಗೂ ಹಿರಿಯರನ್ನು ಒಳಗೊಂಡ ತಂಡ ಇಂದು ಮುಂಜಾನೆಯಿಂದಲೇ ಹುಲ್ಲು ಕತ್ತರಿಸುವ ಯಂತ್ರವನ್ನು ಉಪಯೋಗಿಸಿ ಹುಲ್ಲು ಕತ್ತರಿಸಿ ರಸ್ತೆ ಬದಿಯನ್ನು ಸ್ವಚಗೊಳಿಸಿದರು.
ರಸ್ತೆ ತಂಬಾ ಅಪಯಾಕಾರಿ ಹುಲ್ಲು ಬೆಳೆದಿವೆ. ರಸ್ತೆಯಲ್ಲಿ ಅಪಾಯಕಾರಿ ತಿರುವುಗಳಿದ್ದು ಆಳೆತ್ತರಕ್ಕೆ ಬೆಳೆದ ಹುಲ್ಲುಗಳಿದ್ದ ಕಾರಣ ವಾಹನ ಸವಾರರಿಗೆ ಮುಂದೆ ಬರುವ ವಾಹನಗಳು ಕಾಣಿಸದೇ ಇಗಾಗಲೇ ಹಲವು ಬಾರೀ ಇಲ್ಲಿ ಅಫಘಾತಗಳು ನಡೆದಿವೆ. ಈ ಹಿನ್ನಲೆಯಲ್ಲಿ ರಸ್ತೆ ಬದಿಯಲ್ಲಿ ಬೆಳೆದ ಹುಲ್ಲುಗಳನ್ನು ಕಟಾವು ಮಾಡಲು ನಮ್ಮ ಯುವಕರ ತಂಡ ಮುಂದಾಗಿದೆ. ನಮ್ಮ ಈ ಕಾರ್ಯಕ್ಕೆ ರಿಕ್ಷಾ ಚಾಲಕರು ಹಾಗೂ ಇಲ್ಲಿನ ನಾಗರೀಕರು ಕೈ ಜೋಡಿಸಿದ್ದಾರೆ. ಈ ರಸ್ತೆ ಪಿ ಡಬ್ಲ್ಯು ಇಲಾಖೆಗೆ ಸಂಬಂದಪಟ್ಟಿದ್ದರೂ , ಇಲಾಖೆ ಈ ರಸ್ತೆ ಬಗ್ಗೆ ಗಮನ ಹರಿಸುತ್ತಿಲ್ಲ. ವಾಹನ ಸವಾರರ ಹಿತದೃಷ್ಟಿಯಿಂದ ನಾವು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಇನ್ನೂ ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗೆ ವ್ಯಯ ಮಾಡಲಾಗಿರುವ ಕೋಟ್ಯಾಂತರ ರೂಪಾಯಿ ಹಣ ವ್ಯರ್ಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂದಪಟ್ಟ ಇಲಾಖೆ ಈ ಕೂಡಲೇ ಎಚ್ಚೆತ್ತು ಚರಂಡಿ ಅವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ರಸ್ತೆ ಬದಿಯಲ್ಲಿ ಬೆಳೆದ ಹುಲ್ಲನ್ನು ಕಟಾವು ಮಾಡಲು ಮುಂದಾಗಬೇಕು ಎಂದು ಕುರ್ಕಾಲು ಪಂಚಾಯತ್ ಸದಸ್ಯ ಎಮ್ ಜಿ ನಾಗೇಂದ್ರ ಅವರು ಆಗ್ರಹ ಮಾಡಿದ್ದಾರೆ.