ಮಂಗಳೂರು, ಡಿ29(SS): ಹಿಂದೂಗಳ ಆರಾಧ್ಯ ದೇವರಾಗಿರುವ ಶ್ರೀರಾಮಚಂದ್ರ ಸೇರಿದಂತೆ ಇತರ ದೇವತೆಗಳನ್ನು ಅವಹೇಳನ ಮಾಡಿರುವ ಲೇಖಕ ಭಗವಾನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದು ಪರಿಷತ್ ಸಹ ಕಾರ್ಯದರ್ಶಿ ಪ್ರದೀಪ್ ಸರಿಪಲ್ಲ ಎಂಬವರು ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.
ದೇವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಕೆಲದಿನಗಳ ಹಿಂದೆ ಭಗವಾನ್ ಪ್ರಭು ಶ್ರೀ ರಾಮಚಂದ್ರ ಕುಡುಕ, ಮಾದಕ ವ್ಯಸನಿ ಎಂಬಿತ್ಯಾದಿಯಾಗಿ ನಿಂದನೆ ಮಾಡಿದ್ದರು. ಅವರ ಹೇಳಿಕೆ ವಿರುದ್ದ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು.