ಬೆಂಗಳೂರು, ಡಿ29(SS): ಮಧುಕರ್ ಶೆಟ್ಟಿಯಂತ ಖಡಕ್ ಅಧಿಕಾರಿ ನಿಧನ ನನಗೆ ಅಘಾತ ತಂದಿದೆ. ನಾವು ನಿಮ್ಮ ದಾರಿಯಲ್ಲೇ ಸಾಗುವೆವು ಎಂದು ಕರ್ನಾಟಕದ ಸಿಂಗಂ ಅಣ್ಣಾಮಲೈ ಹೇಳಿದ್ದು, ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಕಾಲಿಕ ಮರಣಕ್ಕೆ ಕಂಬನಿ ಮಿಡಿದಿದ್ದಾರೆ.
ನೀವು ಹಾಗೆ ಹೋಗಿಲ್ಲ, ನಮ್ಮೊಡನೆ ಮಾದರಿಯಾಗಿ ಹೋಗಿದ್ದೀರಿ. ನಿಮ್ಮ ನಿರ್ಧಾರ, ನಿಮ್ಮ ಆಲೋಚನೆಗಳನ್ನೆಲ್ಲಾ ನಮಗೆ ನೀಡಿ ಹೋಗಿದ್ದೀರಿ. ನಾವು ನಿಮ್ಮ ದಾರಿಯಲ್ಲೇ ಸಾಗುವೆವು ಎಂದು ಹೇಳಿದ್ದಾರೆ.
ಮಧುಕರ್ ಶೆಟ್ಟಿ ಒಬ್ಬ ದಕ್ಷ ಅಧಿಕಾರಿ. ಈ ರೀತಿ ಸಿಗಲು ಸಾಧ್ಯವಿಲ್ಲ. ಚಿಕ್ಕಮಗಳೂರಿಗೆ ಅವರ ನೀಡಿದ ಸೇವೆ ಅಭೂತಪೂರ್ವ. ನನಗೆ ಈಗಲೂ ನೆನಪಿದೆ. ಚಿಕ್ಕಮಗಳೂರಿನಲ್ಲಿ ಭೂ ಒತ್ತುವರಿಯಾದಾಗ ಮಧುಕರ್ ಶೆಟ್ಟಿ ಅವರು ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದರು. ಅವರ ದಕ್ಷತೆ ನಿಜಕ್ಕೂ ಅದ್ಭುತ ಎಂದು ಹೇಳಿದರು.
ಮಧುಕರ್ ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದು, ದಿಟ್ಟ ಅಧಿಕಾರಿಯನ್ನು ನೆನೆದು ಅವರ ಅಭಿಮಾನಿಗಳೂ ಕಣ್ಣೀರಾಗಿದ್ದಾರೆ.