ಬ್ರಹ್ಮಾವರ, ಏ 19 (DaijiworldNews/MS): ಆತ್ಮಹತ್ಯೆ ಯತ್ನಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಚಿಕ್ಕಮಗಳೂರು ಮೂಲದ ಮಧು ಮತ್ತು ಸುಜಾತ ದಂಪತಿಯ ಪುತ್ರಿ ಕುಸುಮಾ (19) ಎಂದು ಗುರುತಿಸಲಾಗಿದೆ.
ಕುಸುಮಾ ಅವರು ಸುಮಾರು ಒಂದು ತಿಂಗಳಿಂದ ಬ್ರಹ್ಮಾವರದ ಕಳ್ತೂರು ಗ್ರಾಮದ ಸಂತೆಕಟ್ಟೆ ಬಳಿಯ ಮನೆಯೊಂದರಲ್ಲಿ ಹೋಂ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದರು. ಈಕೆ ಚಿಕ್ಕಮಗಳೂರು ಜಿಲ್ಲೆಯ ಯುವಕನೋರ್ವನನ್ನು ಅತಿಯಾಗಿ ಪ್ರೀತಿಸುತ್ತಿದ್ದು, ಆತ ಪೋನ್ ಕರೆ ಸ್ವೀಕರಿಸಿದ ಹಿನ್ನಲೆ ಹಾಗೂ ಇನ್ನು ಮುಂದೆ ಆತ ತನಗೆ ಸಿಗುವುದಿಲ್ಲ ಬೇಸರಗೊಂಡು ಏ ೧೧ರಂದು ವಿಷ ಸೇವಿದ್ದಾರೆ. ಅಸ್ವಸ್ಥಗೊಂಡ ಆಕೆಯನ್ನು ಮನೆಯರು ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಏ.೧೭ ರಂದು ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ.
ಕುಸುಮ ಪ್ರೇಮ ವೈಫಲ್ಯದಿಂದ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕುಸುಮಳ ತಾಯಿ ಸುಜಾತ ಅವರ ಹೇಳಿಕೆಯಂತೆ, ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821