ಉಡುಪಿ, ಏ 18 (DaijiworldNews/HR): ಉಡುಪಿ ಗುಂಡಿಬೈಲು ಎಂಬಲ್ಲಿ ಮನೆಯ ಹಾಲ್ನ ಟಿಪಾಯಿ ಮೇಲೆ ಇಟ್ಟಿದ್ದ 6½ ಪವನ್ ತೂಕದ ಚಿನ್ನದ ತೆಂಡೂಲ್ಕರ್ ಚೈನ್ ಮತ್ತು ನೀಲಿ ಹರಳಿನ ಲೋಕೆಟ್ ಇರುವ 3½ ಪವನ್ ತೂಕದ ಚಿನ್ನದ ಚೈನ್ ಅನ್ನು ಕಿಟಕಿಯ ಮೂಲಕ ಕಳವು ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಇಂದ್ರಾಳಿಯ ರುರಾಜ್ ನಾಯ್ಕ ಎಂದು ಗುರುತಿಸಲಾಗಿದೆ.
ಸುನೀತಾ ಎಂಬವರ ಮನೆಯ ಹಾಲ್ನ ಟಿಪಾಯಿ ಮೇಲೆ ಇಟ್ಟಿದ್ದ 6½ ಪವನ್ ತೂಕದ ಚಿನ್ನದ ತೆಂಡೂಲ್ಕರ್ ಚೈನ್ ಮತ್ತು ನೀಲಿ ಹರಳಿನ ಲೋಕೆಟ್ ಇರುವ 3½ ಪವನ್ ತೂಕದ ಚಿನ್ನದ ಚೈನ್ ಅನ್ನು ಕಿಟಕಿಯ ಮೂಲಕ ಕಳವು ಗೈದಿದ್ದು, ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 3,60,000 ರೂ. ಎನ್ನಲಾಗಿದೆ.
ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿ ಹೋದ ಪ್ರಸಾದ್ಕುಮಾರ್ ಕೆ. ಪೊಲೀಸ್ ಉಪ ನಿರೀಕ್ಷಕರು ತನಿಖೆ-1, ಹಾಗೂ ಸಿಬ್ಬಂದಿಯವರು ಕಳವಾಗಿದ್ದ ಚಿನ್ನದ ಚೈನ್ ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕದ್ದ ಸ್ಕೂಟರ್ ನ ಸಮೇತ ಕುಕ್ಕಿಕಟ್ಟೆ ರೈಲ್ವೇ ಬ್ರಿಡ್ಜ್ ಬಳಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು, ಆರೋಪಿಗೆ ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರಾದ ಎನ್. ವಿಷ್ಣುವರ್ಧನ್, ಐ.ಪಿ.ಎಸ್, ಉಡುಪಿ ರವರ ಆದೇಶದಂತೆ, ಸಿದ್ದಲಿಂಗಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಸುಧಾಕರ ಸದಾನಂದ ನಾಯ್ಕ್, ಡಿವೈಎಸ್ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪಿ.ಎಸ್.ಐ-1 ಮಹೇಶ್ ಟಿ.ಎಮ್, ಪ್ರಸಾದ್ಕುಮಾರ್ ಕೆ. ಪೊಲೀಸ್ ಉಪ ನಿರೀಕ್ಷಕರು ತನಿಖೆ-1, ಪಿ.ಎಸ್.ಐ-2 ವಾಸಪ್ಪ ನಾಯ್ಕ್, ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ ವಿಜಯ್, ಸತೀಶ್, ಜೀವನ್, ಕಿರಣ್, ಸಂತೋಷ ರಾಠೋಡ್, ಹೇಮಂತ್ ರವರು ಸಹಕರಿಸಿದ್ದಾರೆ.