ಮಂಗಳೂರು, ಏ 18 (DaijiworldNews/MS): ಬಜ್ಪೆಯಲ್ಲಿರುವ ಮಂಗಳೂರು ವಿಶೇಷ ಆರ್ಥಿಕ ವಲಯದ ಮೀನಿನ ಫ್ಯಾಕ್ಟರಿಯೊಂದರಲ್ಲಿ ಭಾನುವಾರ ರಾತ್ರಿ ದುರಂತ ಸಂಭವಿಸಿದ್ದು ಪರಿಣಾಮ ಮೂವರು ಮೃತಪಟ್ಟ ಮತ್ತು ಇಬ್ಬರು ಗಂಭೀರವಾಗಿ ಅಸ್ವಸ್ಥಗೊಂಡ ಘಟನೆ ಭಾನುವಾರ ಸಂಜೆ 7 ಗಂಟೆಗೆ ನಡೆದಿದೆ.
ಹಲವೆಡೆಗಳಿಂದ ಬರುವ ಮೀನು ಶುದ್ದೀಕರಿಸುವ ಬೃಹತ್ ಟ್ಯಾಂಕಿಗೆ ಇಳಿದ ಬಂಗಾಳದ ಮೂವರು ಕಾರ್ಮಿಕರು ಮೃತಪಟ್ಟರೆ ಇಬ್ಬರು ಕಾರ್ಮಿಕರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತಪಟ್ಟ ಕಾರ್ಮಿಕರನ್ನು ಪಶ್ಚಿಮ ಬಂಗಾಳ ಮೂಲದ ಸಮೀರುಲ್ಲಾ ಇಸ್ಲಾಂ, ಉಮರ್ ಫಾರೂಕ್, ನಿಝಾಮುದ್ದೀನ್ (19) ಎಂದು ಗುರುತಿಸಲಾಗಿದೆ. ಶರಪ್ ಅಲಿ , ಮೀರಾದುಲ್ಲಾ ಇಸ್ಲಾಂ ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.
ಎಂದಿನಂತೆ ಮೀನು ಶುದ್ದೀಕರಣಗೊಳಿಸುವ ಟ್ಯಾಂಕಿಗೆ ಇಳಿದ 8 ಮಂದಿ ಕಾರ್ಮಿಕರು ಸ್ವಚ್ಚಗೊಳಿಸಿದ ಮೀನನ್ನು ತೆಗೆಯುವ ಸಂದರ್ಭ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು , ಮೀನು ಸಂಸ್ಕರಣ ಫ್ಯಾಕ್ಟರಿಯನ್ನು ಇದೀಗ ಬಂದ್ ಮಾಡಲಾಗಿದೆ.