ಬೆಂಗಳೂರು, ಡಿ 29(SM): ಎಚ್ 1 ಎನ್ 1ಗೆ ತುತ್ತಾಗಿ ಶುಕ್ರವಾರ ರಾತ್ರಿ ನಿಧನರಾದ ಖಡಕ್ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಅಗಲಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.
"ಅತ್ಯುತ್ತಮ ಅಧಿಕಾರಿಯಾಗಿದ್ದ ಅವರು ನೇರ ನಡೆನುಡಿಗಳಿಂದ ಜನಪ್ರಿಯರಾಗಿದ್ದರು. ಅವರ ಅಕಾಲಿಕ ನಿಧನ ತೀವ್ರ ಆಘಾತವನ್ನುಂಟು ಮಾಡಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ಈ ಆಘಾತ ಸಹಿಸುವ ಶಕ್ತಿ ನೀಡಲಿ" ಎಂದು ಎಚ್ ಡಿ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.
ಇನ್ನು ಇಂದು ಮಧುಕರ್ ಪಾರ್ಥೀವ ಶರೀರವನ್ನು ಹೈದರಬಾದ್ ನಿಂದ ಕರಾವಳಿಗೆ ತಂದು ನಾಳೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.