ಮಂಗಳೂರು, ಡಿ 29(SM): ಭಗವಾನ್ ಕೇವಲ ಪ್ರಚಾರಕ್ಕಾಗಿ ಸುಳ್ಳು ಸಂದೇಶ ಹರಡುತ್ತಾರೆ. ಇಂತಹ ನೀಚ ವ್ಯಕ್ತಿಗೆ ಸರಕಾರ ರಕ್ಷಣೆ ನೀಡಿದೆ ಎಂದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುಬ್ರಹ್ಮಣ್ಯ ಭಜನಾ ಮಂಡಳಿಯ 41 ನೇ ಭಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಾನ್ ಅವರ ತಂದೆ ತಾಯಿಗಳು ತಮ್ಮ ಪುತ್ರ ದೇವರಂತೆ ಆಗಲಿ ಅನ್ನುವ ಉದ್ದೇಶದಲ್ಲಿ ಆ ಹಸರನ್ನಿಟ್ಟಿದ್ದಾರೆ. ಆದರೆ ಭಗವಾನ್ ದಾರಿ ತಪ್ಪಿದ್ದಾರೆ. ಅವರು ದೇವರ ಕಡೆ ಹೋಗದೆ ಸೈತಾನನ ಕಡೆ ಹೊಗಿದ್ದಾರೆ ಎಂದರು. ತಾವು ಓದಿದ ರಾಮಾಯಣದ ಕುರಿತು ಭಗವಾನ್ ಚರ್ಚೆಗೆ ಬರಲಿ ಎಂದು ಪ್ರಮೋದ್ ಸವಾಲು ಹಾಕಿದ್ದಾರೆ.
ಇನ್ನೂ ರಾಮನ ಬಗ್ಗೆ ಅವಹೇಳನ ಮಾಡಿದ್ರೆ ಸರಕಾರ ಸುಮ್ಮನಿದೆ. ಜನರ ಭಾವನೆಗೆ ತೊಂದರೆ ತರುವ ಹೇಳಿಕೆ ನೀಡಿದ್ದಾರೆ. ಸರಕಾರ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಿ. ಇಲ್ಲವಾದಲ್ಲಿ ಭಗವಾನ್ ಮಾನಸಿಕ ಅಸ್ವಸ್ಥ ಎಂದು ಘೋಷಿಸಲಿ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಬರಿಮಲೆ ವಿಚಾರ ಹಿನ್ನಲೆ ಸುಪ್ರೀಂ ಕೋರ್ಟ್ ಬಗ್ಗೆ ನಮಗೆ ಗೌರವವಿದೆ. ಆದರೆ ಧಾರ್ಮಿಕತೆಗೆ ನ್ಯಾಯಾಲದಲ್ಲಿ ತೀರ್ಪು ಕೊಡುವುದಲ್ಲ. ಮಠಾದೀಶರು ವಿದ್ವಾಂಸರು ಇದರ ಬಗ್ಗೆ ಹೇಳಬೇಕು. ಅದನ್ನು ಬಿಟ್ಟು ಸುಪ್ರೀಂ ಕೋಟ್ ಅಲ್ಲ ಎಂದು ಹೇಳಿದ್ದಾರೆ.