ಬಂಟ್ವಾಳ, ಏ 15 (DaijiworldNews/HR): ಮುಂದಿನ ಒಂದು ವರ್ಷದೊಳಗೆ ಈ ಭಾಗದ ಪ್ರತಿಯೊಂದು ಬೇಡಿಕೆಗಳನ್ನು ಪೂರೈಸುವ ಕೆಲಸ ಪ್ರಮಾಣಿಕವಾಗಿ ಮಾಡುತ್ತೇವೆ, ಜೊತೆಗೆ ಪ್ರತಿಯೊಬ್ಬರಿಗೂ ಸರಕಾರದಿಂದ ನಿವೇಶನದ ವ್ಯವಸ್ಥೆ ಮಾಡುತ್ತೇನೆ ಎಂಬ ಭರವಸೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೀಡಿದರು.
ಕಾವಳಪಡೂರು ಗ್ರಾಮದ 13 ಕುಟುಂಬಗಳಿಗೆ 94 ಸಿ.ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು, ಡಾ! ಅಂಬೇಡ್ಕರ್ ಜಯಂತಿ ದಿನದಂದು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಆಚರಣೆ ಮಾಡಬೇಕು ಎಂಬ ದೃಷ್ಟಿಯಿಂದ ದಲಿತ ಕಾಲೋನಿಗೆ ತೆರಳಿ 13 ಕುಟುಂಬಗಳಿಗೆ 94 ಸಿ. ಹಕ್ಕು ಪತ್ರ ವಿತರಿಸಲಾಗುತ್ತಿದೆ. ಕಾವಳಪಡೂರು ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಇಲ್ಲಿನ ರಸ್ತೆ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ ಎಂದರು.
ಪ್ರಮೋದ್ ಕುಮಾರ್ ರೈ ಮಾತನಾಡಿ, 13 ಜನರಿಗೆ ಕೇವಲ ಮೂರು ದಿನದಲ್ಲಿ ಹಕ್ಕು ಪತ್ರ ನೀಡುವ ಕೆಲಸ ಆಗಿದೆ, ಶಾಸಕರ ಇಚ್ಚಾಶಕ್ತಿಗೆ ಇದು ಸಾಕ್ಷಿಯಾಗಿದೆ. ಈ 13 ಕುಟುಂಬ ಗಳ ಹಕ್ಕು ಪತ್ರಕ್ಕೆ ಸರಕಾರಕ್ಕೆ ಪಾವತಿಸುವ ಮೊತ್ತವನ್ನು ಕೂಡ ಸ್ವತಃ ಶಾಸಕರೇ ಪಾವತಿಸಿ ಸಕಾಲಕ್ಕೆ ಹಕ್ಕು ಸಿಗುವಲ್ಲಿ ಶ್ರಮಿಸಿದ್ದಾರೆ ಎಂದಿದ್ದಾರೆ.
ಬಂಟ್ವಾಳ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷೆರಜನಿ, ಉಪಾಧ್ಯಕ್ಷೆ ವಸಂತಿ, ಸದಸ್ಯ ರಾದ ಭವಾನಿ ಶ್ರೀಧರ್ ಪೂಜಾರಿ, ಉಮೇಶ್, ಮಾಜಿ ಪಂ.ಸದಸ್ಯರಾದ ಆನಂದ, ಪ್ರಮುಖರಾದ ಸತೀಶ್ ಶೆಟ್ಟಿ, ವಿಶ್ವನಾಥ್ ಚೆಂಡ್ತಿಮಾರ್, ಯಸವಂತ ನಗ್ರಿ, ಶಿವಪ್ಪ ಗೌಡ ನಿನ್ನಕಲ್ಲು,ಸತೀಶ್ ಕುಲಾಲ್, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಕರಣಿಕೆ ಆಶಾಮೆಹಂದಲೆ, ಪಿ.ಡಿ.ಒ ಪಂಕಜ ಮತ್ತಿತರರು ಉಪಸ್ಥಿತರಿದ್ದರು.