ಕೋಟ, ಏ 14 (DaijiworldNews/DB): ಬುಧವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಯ ಪರಿಣಾಮ ಕೋಟದ ಫೆನಾಂಡಿಸ್ ಕಂಪೌಂಡ್ನಲ್ಲಿ ಬೃಹತ್ ಗಾತ್ರದ ತೆಂಗಿನ ಮರ ಉರುಳಿ ಬಿದ್ದಿದೆ.
ಸುಮಾರು 40 ವರ್ಷ ಹಳೆಯದಾದ ಮರ ಇದಾಗಿದ್ದು, ಗಾಳಿ ಮಳೆಯ ಕಾರಣ ಧರಾಶಾಹಿಯಾಗಿದೆ. ಪಕ್ಕದಲ್ಲೇ ಮನೆ ಮತ್ತು ಮೇರಿ ಮಾತೆಯ ಪ್ರತಿಮೆ ಇದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಅಲ್ಲದೇ ಯಾವುದೇ ಆಸ್ತಿಗೂ ಹಾನಿ ಉಂಟಾಗಿಲ್ಲ.