ಉಡುಪಿ, ಡಿ28(SS): ಹಿಂದೂ ಧರ್ಮದ ಮೇಲೆ ಪ್ರೊ. ಭಗವಾನ್ ದ್ವೇಷ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ಭಗವಾನ್ ಮಾತಿಗೆ ಯಾವುದೇ ರೀತಿಯ ಬೆಲೆ ಕೊಡುವ ಅವಶ್ಯಕತೆ ಇಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಉಡುಪಿಯಲ್ಲಿ ಪ್ರೊ.ಭಗವಾನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀರಾಮ ಶಂಭೂಕನನ್ನು ಕೊಂದಿದ್ದಾನೆ ಎಂಬುದು ಭಗವಾನ್ ಅವರ ಆರೋಪ. ಶಂಭೂಕ ಒಬ್ಬ ದುಷ್ಟ ಬುದ್ದಿಯ ವ್ಯಕ್ತಿಯಾಗಿದ್ದನು. ಶಂಭೂಕ ದುರುದ್ದೇಶಕ್ಕೆ ಮಾಟದ ರೂಪದ ತಪಸ್ಸು ಮಾಡಿದ್ದನು. ಈ ಕಾರಣಕ್ಕೆ ರಾಮ ಸಂಹಾರ ಮಾಡಿದ ಎಂದು ಪೇಜಾವರ ಶ್ರೀ ತಿಳಿಸಿದರು.
ಪ್ರಭು ಶ್ರೀರಾಮನು ಕ್ಷತ್ರೀಯ ಕುಲಕ್ಕೆ ಸೇರಿದ ವ್ಯಕ್ತಿ. ಹೀಗಾಗಿ ಆತ ಮಾಂಸಾಹಾರ ಸೇವನೆ ಮಾಡಿದ್ದರೆ ಅದರಲ್ಲಿ ಆಶ್ಚರ್ಯ ಇಲ್ಲ. ಮೇರೇಯ ಅಂದರೆ ಅದು ಮದ್ಯ ಅಲ್ಲ, ಅದೊಂದು ಪಾನೀಯ. ಏಸು ಕ್ರಿಸ್ತ, ಪೈಗಂಬರ್ ಮಾಂಸ ತಿಂದು ದೇವರಾಗಿಲ್ಲವೇ...? ಶ್ರೀ ರಾಮನ ಬಗ್ಗೆ ಮಾತ್ರ ಏಕೆ ಕೇವಲವಾಗಿ ಮಾತನಾಡುತ್ತೀರಿ..? ಎಂದು ಪ್ರಶ್ನಿಸಿದರು.