ಬೆಂಗಳೂರು,ಡಿ 28 (MSP): ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎದುರಿಸುವ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುವ ಕೊಠಡಿಗಳಲ್ಲಿ 'ಡಿಜಿಟಲ್ ಮತ್ತು ಸ್ಮಾರ್ಟ್' ಕೈ ಗಡಿಯಾರವನ್ನು ಬಳಸುವಂತಿಲ್ಲ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆದೇಶ ಹೊರಡಿಸಿದೆ.
ಡಿಜಿಟಲ್ ಮತ್ತು ಸ್ಮಾರ್ಟ್ ವಾಚ್ ನಿಷೇಧಿಸಿ ಆದೇಶ ಹೊರಡಿಸಿದ ಇಲಾಖೆ ಅನ್ಲಾಗ್ ಅಥವಾ ಮೆಕ್ಯಾನಿಕಲ್ ಕೈ ಗಡಿಯಾರಗಳನ್ನು ಮಾತ್ರ ಬಳಸಲು ಅವಕಾಶ ನೀಡಿದೆ.
'ಪರೀಕ್ಷಾ ಬರೆಯುವ ಸಂದರ್ಭದಲ್ಲಿ ಸಮಯ ಪಾಲನೆಗಾಗಿ ವಿದ್ಯಾರ್ಥಿಗಳಿಗೆ ವಾಚ್ ಬಳಸುವುದು ತೀರಾ ಅವಶ್ಯಕ ಹೀಗಾಗಿ ಕೈ ಗಡಿಯಾರ ಬಳಸಲು ಅವಕಾಶ ಕಲ್ಪಿಸಿದೆ. ಆದರೆ, ಡಿಜಿಟಲ್ ಅಥವಾ ಸ್ಮಾರ್ಟ್ ಕೈಗಡಿಯಾರಗಳನ್ನು ಬಳಸಲು ಅವಕಾಶ ಕಲ್ಪಿಸಿದರೆ ಪರೀಕ್ಷೆಯಲ್ಲಿ ನಕಲು ಮಾಡಲು ಪ್ರೇರೇಪಿಸಿದಂತಾಗುತ್ತದೆ. ಅದ್ದರಿಂದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಡಿಜಿಟಲ್ ಮತ್ತು ಸ್ಮಾರ್ಟ್ ವಾಚ್ಗಳನ್ನು ಧರಿಸಿ ಪರೀಕ್ಷೆ ಬರೆಯುವಂತಿಲ್ಲ,ಪರೀಕ್ಷಾ ಕೇಂದ್ರದ ಮೇಲ್ವಿ
ಚಾರಕರು ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಿದ್ದಾರೆ' ಎಂದು ಮಂಡಳಿಯ ಅಧ್ಯಕ್ಷ ಡಾ. ಪಿ.ಸಿ.ಜಾಫರ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.