ಕಾರ್ಕಳ, ಏ 13 (DaijiworldNews/DB): ಕಾರ್ಕಳ ಭಾಗದಲ್ಲಿ ಸಕ್ರಿಯವಾಗಿದ್ದ ಗೋ ಕಳ್ಳರ ತಂಡವನ್ನು ಬೆನ್ನಟ್ಟಿದ ಹೆಬ್ರಿ ಇನ್ಸ್ಪೆಕ್ಟರ್ ಸುದರ್ಶನ್ ದೊಡ್ಡಮನೆ ನೇತೃತ್ವದ ಪೊಲೀಸರು ಗೋ ಸಾಗಾಟ ಮಾಡುತ್ತಿದ್ದ ವಾಹನ ಸೇರಿ 14 ಗೋವುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಬ್ರಿ ಬ್ಯಾಣ ಪರಿಸರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಗೋ ಸಾಗಾಟಗಾರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಪೊಲೀಸರು ವಾಹನ ಮುಟ್ಟುಗೋಲು ಹಾಕಿದ್ದಾರೆ. ಪೊಲೀಸರಿಗೆ ಹೆದರಿ ಅತಿವೇಗದಿಂದ ಚಲಿಸುತ್ತಿದ್ದಾಗ ಗೋಕಳ್ಳರ ವಾಹನ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದಿದ್ದು ಈ ವೇಳೆ ಗೋ ಕಳ್ಳರು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಮುರಿದು ಜಾನುವಾರುಗಳನ್ನು ವಾಹನದಲ್ಲಿ ಸಾಗಾಟ ಮಾಡುತ್ತಿದ್ದರು. ರಕ್ಷಿಸಲ್ಪಟ್ಟ ಗೋವುಗಳ ಪೈಕಿ ಒಂದು ಜಾನುವಾರು ಸಾವನ್ನಪ್ಪಿದೆ. ಗಂಭೀರ ಸ್ಥಿತಿಯಲ್ಲಿರುವ ಗೋವುಗಳಿಗೆ ಪಶು ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ. ಗೋಕಳ್ಳರು ಮಂಗಳೂರು ಮೂಲದವರಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.