ಉಡುಪಿ, ಏ 13 (DaijiworldNews/HR): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಎಫ್ಎಸ್ಎಲ್ ತಂಡ ಉಡುಪಿಗೆ ಆಗಮಿಸಿ ಸಂತೋಷ್ ಕುಟುಂಬಸ್ಥರ ಸಮ್ಮುಖದಲ್ಲಿ ಕೊಠಡಿ ಸಂಖ್ಯೆ 207ಕ್ಕೆ ಪ್ರವೇಶ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸರು ಸ್ಥಳದಲ್ಲಿ ಉಪಸ್ಥಿತಿಯಲ್ಲಿ ಶ್ವಾನದಳ ಬೆರಳಚ್ಚು ತಜ್ಞರಿಂದಲೂ ಪರಿಶೀಲನೆ ನಡೆಯಿತ್ತಿದ್ದು, ಸುಮಾರು ಎರಡು ಗಂಟೆಗಳ ಕಾಲ ನಡೆಯಲಿರುವ ಪಂಚನಾಮೆ ಪ್ರಕ್ರಿಯೆ ನಡೆಯಲಿದೆ.
ಇನ್ನು ಶಾಂಭವಿ ಲಾಡ್ಜ್ ಗೆ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ತಂಡವನ್ನು ಕೂಡ ಉಡುಪಿ ಪೊಲೀಸರು ಕಳುಹಿಸಿದ್ದು, ಮುನ್ನೆಚ್ಚರಿಕಾ ಮತ್ತು ಮುಂಜಾಗ್ರತಾ ಕ್ರಮವಾಗಿ ಎರಡು ತಂಡಗಳಿಂದ ಪರಿಶೀಲನೆ ನಡೆಯುತ್ತಿದೆ.
ಉಡುಪಿಗೆ ಸಂತೋಷ್ ಪಾಟೀಲ್ನ ಸುಮಾರು ಎಂಟು ಜನ ಕುಟುಂಬಸ್ಥರು ಬೆಳಗಾವಿಯಿಂದ ಉಧುಪಿಯ ಶಾಂಭವಿ ಲಾಡ್ಜ್ ಗೆ ಆಗಮಿಸಿದ್ದು, ಸಂತೋಷ್ನ ಸಹೋದರ ಬೆಂಗಳೂರಿನಿಂದ ಉಡುಪಿಗೆ ಆಗಮಿಸಿದ್ದಾರೆ.