ಕಾಸರಗೋಡು, ಏ 12 (DaijiworldNews/SM): ಬೆಲೆ ಏರಿಕೆಗೆ ಕಡಿವಾಣ ಹಾಕಲು ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನ ಹೋಟೆಲ್ ಗಳಲ್ಲಿ ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ತಪಾಸಣೆ ನಡೆಸಿದರು.
ಚಹಾ, ತಿಂಡಿ ತಿನಿಸುಗಳಿಗೆ ಕೆಲ ಹೋಟೆಲ್ ಗಳಲ್ಲಿ ದುಬಾರಿ ದರ ವಸೂಲು ಮಾಡುತ್ತಿರುವುದು ತಪಾಸಣೆಯಿಂದ ಪತ್ತೆಯಾಗಿದೆ. ಒಂದು ಗ್ಲಾಸ್ ಚಹಾಕ್ಕೆ 12 ರೂ. ನಿಂದ 20 ರೂಪಾಯಿ ತನಕ ವಸೂಲು ಮಾಡುತ್ತಿರುವುದು ಕಂಡುಬಂತು. ಚಹಾದ ಬೆಲೆ ಇಳಿಕೆ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದರು. ಅಧಿಕಾರಿಗಳಾದ ಕೆ. ಎನ್. ಬಿಂದು, ಪಿ.ವಿ. ಶ್ರೀನಿವಾಸನ್, ಸಂಜಯ್, ಸುರೇಶ್ ನಾಯ್ಕ್ ಮೊದಲಾದವರು ತಂಡದಲ್ಲಿದ್ದರು.